ನವದೆಹಲಿ: ಭಾರತಕ್ಕೆ ಆಮದು ಮಾಡಿಕೊಳ್ಳುವ ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ಮೇಲೆ ಗರಿಷ್ಠ ಸುಂಕ ಇರುವುದು ದೇಶದಲ್ಲಿ ಇ.ವಿ.ಗಳ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಐಷಾರಾಮಿ ಕಾರುಗಳನ್ನು ತಯಾರಿಸುವ, ಜರ್ಮಿನಿಯ ಔಡಿ ಕಂಪನಿ ಹೇಳಿದೆ. ಸುಂಕ ತಗ್ಗಿಸುವುದರಿಂದ ಹೆಚ್ಚು ವಾಹನಗಳನ್ನು ಮಾರಾಟ ಮಾಡಲು ಹಾಗೂ ಸ್ಥಳೀಯ ತಯಾರಿಕೆಗೆ ಹೂಡಿಕೆ ಮಾಡಲು ನೆರವಾಗಲಿದೆ ಎಂದು ತಿಳಿಸಿದೆ.

ಕಂಪನಿಯು ದೇಶದಲ್ಲಿ ಸದ್ಯ ಐದು ಇ.ವಿ.ಗಳನ್ನು ಮಾರಾಟ ಮಾಡುತ್ತಿದೆ. ಸುಂಕ ತಗ್ಗಿಸುವುದರಿಂದ ವಾಹನಗಳ ಬೆಲೆ ಕಡಿಮೆ ಮಾಡಲು ಅನುಕೂಲ ಆಗಲಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ಪಾಲು ಹೊಂದಲು ಸಾಧ್ಯವಾಗಲಿದೆ ಎಂದು ಹೇಳಿದೆ.

ಮೂರರಿಂದ ಐದು ವರ್ಷಗಳವರೆಗೆ ಸುಂಕದಲ್ಲಿ ರಿಯಾಯಿತಿ ದೊರೆತರೆ ಮಾರಾಟ ಹೆಚ್ಚಾಗಲಿದ್ದು, ಆಗ ಭಾರತದಲ್ಲಿಯೇ ತಯಾರಿಕೆ ಆರಂಭಿಸಲು ಹೂಡಿಕೆ ಮಾಡುವಂತೆ ನಮ್ಮ ಕೇಂದ್ರ ಕಚೇರಿಗೆ ಮನವರಿಕೆ ಮಾಡಲು ಸಾಧ್ಯ ಎಂದು ಕಂಪನಿಯ ಭಾರತದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.