ನವದೆಹಲಿ: ಸೆಮಿಕಂಡಕ್ಟರ್ ಕೊರತೆಯಿಂದಾಗಿ ವಾಹನ ತಯಾರಕರು, ಡೀಲರ್ಗಳಿಗೆ ವಾಹನ ನೀಡಲು ಹೆಣಗಾಡುತ್ತಿದ್ದಾರೆ. ಇದರಿಂದಾಗಿ ಈ ಬಾರಿಯ ಹಬ್ಬದ ಋತುವಿನಲ್ಲಿ ವಾಹನ ವಿತರಕರು ಭಾರಿ ನಷ್ಟ ಅನುಭವಿಸಲಿದ್ದಾರೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟದ (ಎಫ್ಎಡಿಎ) ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದ್ದಾರೆ.

ಚಿಪ್ ಕೊರತೆಯ ಸಮಸ್ಯೆಯು ಮುಂದುವರೆದಿರುವುದರಿಂದ ಕಂಪನಿಗಳು ವಾಹನ ತಯಾರಿಕೆಯಲ್ಲಿ ಸಮಸ್ಯೆ ಎದುರಿಸುತ್ತಿವೆ. ಹೀಗಾಗಿ ಅವು ತಮ್ಮ ವಿತರಕ ಪಾಲುದಾರರಿಗೆ ಸರಬರಾಜು ಪ್ರಮಾಣ ಕಡಿತಗೊಳಿಸುವಂತಾಗಿದೆ.

ನವರಾತ್ರಿಯಿಂದ ಆರಂಭ ಆಗುವ 42 ದಿನಗಳ ಹಬ್ಬದ ಋತುವಿನ ಸಂದರ್ಭದಲ್ಲಿ ಗ್ರಾಹಕರು ತಮ್ಮ ಆಯ್ಕೆಯ ವಾಹನ ಖರೀದಿಸಲು ಹೆಚ್ಚಿನ ಸಮಯ ಕಾಯಬೇಕಾಗುತ್ತಿದೆ. ಸಮಸ್ಯೆಯ ಕುರಿತು ಗ್ರಾಹಕರಿಗೆ ಮನವರಿಕೆ ಮಾಡಿಕೊಡಲು ವಿತರಕರು ಶ್ರಮಪಡುತ್ತಿದ್ದಾರೆ.

ಹಲವು ಮಾದರಿಯ ವಾಹನಗಳಿಗೆ ಉತ್ತಮ ಬೇಡಿಕೆ ಇದ್ದರೂ, ತಕ್ಷಣಕ್ಕೆ ವಾಹನ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಬುಕಿಂಗ್ ರದ್ದುಪಡಿಸುವುದು ಆಗುತ್ತಿದೆ. ಸ್ಥಳದಲ್ಲಿಯೇ ಬುಕಿಂಗ್ ಮಾಡುವವರ ಸಂಖ್ಯೆ ಇಳಿಕೆ ಆಗುತ್ತಿದೆ.

‘ವರ್ಷದಲ್ಲಿ ಆಗುವ ಒಟ್ಟಾರೆ ವಾಹನ ಮಾರಾಟದಲ್ಲಿ ಶೇಕಡ 40ರಷ್ಟು ಹಬ್ಬದ ಋತುವಿನ ಎರಡು ತಿಂಗಳಲ್ಲಿ ಆಗುತ್ತದೆ. ಈ ಅವಧಿಯಲ್ಲಿಯೇ ನಾವು ನಿಜವಾಗಿಯೂ ಗಳಿಕೆ ಕಾಣುವುದು ಮತ್ತು ವರ್ಷದ ಉಳಿದ ಅವಧಿಯ ಕಾರ್ಯಾಚರಣೆಗೆ ಉಳಿತಾಯ ಮಾಡುವುದು. ಈ ವರ್ಷ ಬೇಡಿಕೆಗೆ ತಕ್ಕಷ್ಟು ವಾಹನಗಳು ಲಭ್ಯವಿಲ್ಲದೇ ಇರುವುದರಿಂದ ನಷ್ಟ ಅನುಭವಿಸುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಬ್ಬದ ಸಂದರ್ಭದಲ್ಲಿ 4 ಲಕ್ಷದಿಂದ 4.5 ಲಕ್ಷ ವಾಹನಗಳು ಮಾರಾಟ ಆಗುತ್ತವೆ. ಆದರೆ ಈ ಬಾರಿ ಮಾರಾಟವು 3 ಲಕ್ಷದಿಂದ 3.5 ಲಕ್ಷದವರೆಗೆ ಮಾತ್ರ ತಲುಪುವ ಸಾಧ್ಯತೆ ಇದೆ. ಈ ಪ್ರಮಾಣದಲ್ಲಿ ಮಾರಾಟ ಆದರೂ ಅದು ಅದೃಷ್ಟವೇ ಸರಿ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.