ನವದೆಹಲಿ (ಪಿಟಿಐ): ‘ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರಿಗೆ ಸುಲಭವಾಗಿ ಸಾಲ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಅಕ್ಟೋಬರ್ನಲ್ಲಿ ದೇಶದ 400 ಜಿಲ್ಲೆಗಳಲ್ಲಿ ಸಾಲ ಮೇಳ ನಡೆಸಲಿವೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಗುರುವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆಅವರು ಈ ಮಾಹಿತಿ ನೀಡಿದ್ದಾರೆ.

ಎಲ್ಲಾ ವಲಯದ ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡು ಈ ಸಾಲಮೇಳ ನಡೆಸಲಾಗುತ್ತಿದೆ. ಆದರೆ ಮನೆ ಖರೀದಿಸುವವರು, ಮಧ್ಯಮ–ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಹಾಗೂ ರೈತರಿಗೆ ಪ್ರಾಮುಖ್ಯ ನೀಡಲಾಗುತ್ತದೆ.ಸಾಲ ನೀಡಿಕೆಗಾಗಿಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಈಗಾಗಲೇ ಕೆಲವುಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು (ಎನ್ಬಿಎಫ್ಸಿ) ಗುರುತಿಸಿವೆ.ಸಾಲ ಮೇಳಕ್ಕೆ ಸಂಬಂಧಿಸಿದಂತೆ ಎನ್ಬಿಎಫ್ಸಿಗಳು ಮತ್ತು ಸಾಲಗಾರರೊಂದಿಗೆ ಬ್ಯಾಂಕ್ ಗಳು ಸಭೆ ನಡೆಸಲಿವೆ. ಮುಂದಿನ ವಾರ ಇಂತಹ ಸಭೆಗಳು ನಡೆಯುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದ್ದಾರೆ.

ಸಾಲ ಮೇಳವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಅಕ್ಟೋಬರ್ 3ರಿಂದ 7ರವರೆಗೆ 200 ಜಿಲ್ಲೆಗಳಲ್ಲಿ ಹಾಗೂ ಅಕ್ಟೋಬರ್ 11ರಿಂದ ಅನಿರ್ದಿಷ್ಟಾವಧಿವರೆಗೆ ಉಳಿದ 200 ಜಿಲ್ಲೆಗಳಲ್ಲಿ ಸಾಲ ಮೇಳಗಳು ನಡೆಯಲಿವೆ.

ಕೈಗಾರಿಕೆಗಳು ನಿರಾಳ

ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ (ಎಂಎಸ್ಎಂಇ) ವಲಯದಲ್ಲಿ ಮರುಪಾವತಿ ಆಗದೇ ಇರುವ ಸಾಲವನ್ನು 2020ರ ಮಾರ್ಚ್ವರೆಗೂ ವಸೂಲಾಗದ ಸಾಲ (ಎನ್ಪಿಎ) ಎಂದು ಪರಿಗಣಿಸದೇ ಇರುವಂತೆ ಎಲ್ಲಾ ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಆರ್ಬಿಐ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಅದನ್ನು ಅನುಸರಿಸುವಂತೆ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ. ಸಾಲವನ್ನು ಮರು ಹೊಂದಾಣಿಕೆ ಮಾಡಲು ಸಾಧ್ಯವಿದೆಯೇ ಎನ್ನುವುದನ್ನೂ ಪರಿಶೀಲಿಸಲು ಹೇಳಲಾಗಿದೆ’ ಎಂದು ನಿರ್ಮಲಾ ತಿಳಿಸಿದ್ದಾರೆ.

ದೀಪಾವಳಿಯು ಬೃಹತ್ ಖರೀದಿ ಋತು. ಅದನ್ನು ಉತ್ತೇಜಿಸಲು ಜನರಿಗೆ ಹಣ ದೊರೆಯುವಂತೆ ಮಾಡುವುದೇ ಸಾಲ ಮೇಳದ ಉದ್ದೇಶ

- ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.