ನವದೆಹಲಿ: ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ಮತ್ತು ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ ಲಿಮಿಟೆಡ್‌ನಿಂದ ₹2,673 ಕೋಟಿ ಮೌಲ್ಯದ ಉಪಕರಣಗಳನ್ನು ಪೂರೈಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಶುಕ್ರವಾರ ತಿಳಿಸಿದೆ.

ಬಿಇಎಲ್ ತಯಾರಿಸಿದ ಉಪಕರಣಗಳು ‘ಆತ್ಮನಿರ್ಭರ್ ಭಾರತ್’ ಕಾರ್ಯಕ್ರಮದ ಭಾಗವಾಗಿವೆ ಎಂದು ಷೇರುಪೇಟೆಗೆ ಕಂಪನಿ ತಿಳಿಸಿದೆ.

ಮುಂದಿನ ತಲೆಮಾರಿನ ಜಲಗಸ್ತು ನೌಕೆಗಳಲ್ಲಿ (ಎನ್‌ಜಿಒಪಿವಿ) ಬಳಸಲು 14 ರೀತಿಯ ಸೆನ್ಸರ್‌ಗಳ ಪೂರೈಕೆ ಮಾಡಲು ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ (₹1,701 ಕೋಟಿ) ಮತ್ತು ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ (₹972 ಕೋಟಿ) ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಇಎಲ್ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಇಎಲ್ ₹25,935 ಕೋಟಿ ಮೌಲ್ಯದ ಆರ್ಡರ್‌ಗಳನ್ನು ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.