ವಾಷಿಂಗ್ಟನ್: ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಅವಘಡ ಉಂಟಾಗುವ ಸಾಧ್ಯತೆ ಇರುವುದರಿಂದ ಬಿಎಂಡಬ್ಲ್ಯು ಕಂಪನಿ ತಾನು ಮಾರಾಟ ಮಾಡಿದ 7 ಲಕ್ಷಕ್ಕೂ ಅಧಿಕ ಕಾರುಗಳನ್ನು ಹಿಂಪಡೆಯಲಿದೆ.

ಎಕ್ಸ್ 1, ಎಕ್ಸ್ 3 ಮತ್ತು ಎಕ್ಸ್ 5 ಸೇರಿದಂತೆ ಇತರೆ ಮಾದರಿಯ ಕಾರುಗಳನ್ನು ಹಿಂಪಡೆಯುವಂತೆ ರಾಷ್ಟ್ರೀಯ ಹೆದ್ದಾರಿ ಸುರಕ್ಷತಾ ವಿಭಾಗವು (ಎನ್‌ಎಚ್‌ಟಿಎಸ್‌ಎ) ಸೂಚನೆ ನೀಡಿದೆ.

‘ಕಾರಿನಲ್ಲಿರುವ ನೀರಿನ ಪಂಪ್ ಅನ್ನು ಸರಿಯಾಗಿ ಮುಚ್ಚಲಾಗಿಲ್ಲ. ಇದರಿಂದ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಯಿದೆ’ ಎಂದು ಎನ್‌ಎಚ್‌ಟಿ ಎಸ್‌ಎ ವರದಿ ಸಲ್ಲಿಸಿತ್ತು.

7 ಲಕ್ಷದ 20 ಸಾವಿರಕ್ಕೂ ಅಧಿಕ ವಾಹನಗಳ ಮಾಲೀಕರಿಗೆ ಈ ಬಗ್ಗೆ ಅಕ್ಟೋಬರ್‌ನಲ್ಲಿ ಕಂಪನಿಯು ಮಾಹಿತಿ ನೀಡುವ ಸಾಧ್ಯತೆಗಳಿದ್ದು, ಬಿಎಂಡಬ್ಲ್ಯು ಶೋರೂಮ್‌ಗಳಲ್ಲಿ ಉಚಿತವಾಗಿ ರಿಪೇರಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.