ನವದೆಹಲಿ: ‘ಭಾರತದ ಬೆಳವಣಿಗೆಯ ಹಾದಿಯಲ್ಲಿ ಬಂಡವಾಳ ಮಾರುಕಟ್ಟೆಯ ಪಾತ್ರ ಮತ್ವದ್ದಾಗಿದ್ದು, ತಂತ್ರಜ್ಞಾನ, ನಾವೀನ್ಯತೆ ಹಾಗೂ ಡಿಜಿಟಲೀಕರಣದ ಮೂಲಕ ಇದು ಇನ್ನಷ್ಟು ವಿಸ್ತಾರವಾಗಿದೆ’ ಎಂದು 2023–24ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದರು.

‘ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಾಗೂ ರಾಜಕೀಯ ಸಮಸ್ಯೆಗಳಿದ್ದರೂ ಭಾರತದ ಮಾರುಕಟ್ಟೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಜಾಗತಿಕ ರಾಜಕೀಯ ಸಂಘರ್ಷಗಳಿಂದ ಉಂಟಾದ ಅಪಾಯ, ಹೆಚ್ಚುತ್ತಿರುವ ಬಡ್ಡಿ ದರ ಹಾಗೂ ಸರಕುಗಳ ಬೆಲೆಯಲ್ಲಿ ಏರಿಕೆಯ ನಡುವೆಯೂ ಭಾರತದ ಬಂಡವಾಳ ಮಾರುಕಟ್ಟೆಯು ಜಗತ್ತಿನಲ್ಲಿ ವೃದ್ಧಿ ಕಾಣುತ್ತಿರುವ ಅತ್ಯುತ್ತಮ ಮಾರುಕಟ್ಟೆ ಎನಿಸಿಕೊಂಡಿದೆ’ ಎಂದಿದ್ದಾರೆ.

ಆರ್ಥಿಕ ವರ್ಷ 2024ರಲ್ಲಿ ಬಿಎಸ್ಇ ಸೆನ್ಸೆಕ್ಸ್ ಶೇ 25ರಷ್ಟು ಬೆಳವಣಿಗೆ ಕಂಡಿದೆ. ಇದು 2025ರವರೆಗೂ ಮುಂದುವರಿಯುವ ವಿಶ್ವಾಸವಿದೆ. ಜುಲೈ 3ರಂದು 30 ಷೇರುಗಳ ಇಂಡೆಕ್ಸ್ ದಿನದ ವಹಿವಾಟಿನಲ್ಲಿ 80 ಸಾವಿರದ ಗಡಿಯನ್ನು ಮೊದಲ ಬಾರಿಗೆ ದಾಟಿ ಇತಿಹಾಸ ನಿರ್ಮಿಸಿದೆ ಎಂದಿದ್ದಾರೆ.

'ದೇಶದ ಷೇರುಪೇಟೆಯ ಅದ್ಭುತ ಬೆಳವಣಿಗೆಯು ಜಗತ್ತಿನ ಪ್ರಮುಖ ಮಾರುಕಟ್ಟೆ ಹಾಗೂ ಬೆಳೆಯುತ್ತಿರುವ ಮಾರುಕಟ್ಟೆಗೆ ಹೋಲಿಸಿದರೆ ಇದು ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಆಘಾತಕ್ಕೆ ಭಾರತ ನೀಡುತ್ತಿರುವ ದಿಟ್ಟ ಉತ್ತರವಾಗಿದೆ. ಈ ಬೆಳವಣಿಗೆಯು ದೇಶದ ಸ್ಥಿರ ಆರ್ಥಿಕ ಪರಿಸ್ಥಿತಿ ಹಾಗೂ ದೇಶೀಯ ಹೂಡಿಕೆದಾರರ ಸಾಮರ್ಥ್ಯವನ್ನು ಆಧರಿಸಿದೆ’ ಎಂದು ಸೀತಾರಾಮನ್ ಸಂಸತ್ತಿನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.