ಶೆಂಜೆನ್ (ಚೀನಾ): 2022ರಲ್ಲಿ ರಾಯಧನ ಆದಾಯದ ಮೂಲಕ $560 ಮಿಲಿಯನ್ ಗಳಿಸಿದ್ದಾಗಿ ಚೀನಾದ ಟೆಕ್ ದೈತ್ಯ ಹುವಾವೆ ಟೆಕ್ನಾಲಜೀಸ್ ಹೇಳಿದೆ.

ಇಲ್ಲಿರುವ ಕೇಂದ್ರ ಕಚೇರಿಯಲ್ಲಿ ಮಾಡಿದ ಭಾಷಣದಲ್ಲಿ ಕಂಪನಿಯ ಬೌದ್ಧಿಕ ಆಸ್ತಿ ವಿಭಾಗದ ಮುಖ್ಯಸ್ಥ ಅಲನ್ ಫಾನ್ ಅವರು ಈ ವಿಷಯ ತಿಳಿಸಿದರು.

ಕಂಪನಿ ತಯಾರಿಸಿದ ಹ್ಯಾಂಡ್ಸೆಟ್ಗಳ ಮಾರಾಟ ಕಡಿಮೆಯಾಗಿದ್ದು, ಹೀಗಾಗಿ ಐಪಿದಾರರಿಗೆ ಪಾವತಿ ಇಳಿಕೆಯಾಗಿದೆ. ಇದರಿಂದ ಕಳೆದ 2 ವರ್ಷಗಳಲ್ಲಿ ರಾಯಧನ ಪಾವತಿಗಿಂತ, ರಾಯಧನ ಆದಾಯ ಹೆಚ್ಚಳವಾಗಿದೆ ಎಂದು ಫಾನ್ ಅವರು ತಿಳಿಸಿದರು.

ಕಂಪನಿಯು ಸ್ಯಾಮ್ಸಂಗ್ ಹಾಗೂ ಓಪ್ಪೋದಂತ ಫೋನ್ ತಯಾರಕರ ಕಂಪನಿಗಳು ಹಾಗೂ ಆಡಿ, ಮರ್ಸಿಡೀಸ್ ಬೆಂಜ್, ಬಿಎಂಡಬ್ಲ್ಯೂ, ಪೋರ್ಶೆ, ಸುಬಾರು, ಲ್ಯಾಂಬೊರ್ಗಿನಿ ಹಾಗೂ ಬೆಂಟ್ಲಿಯಂಥ ಆಟೋಮೊಬೈಲ್ ಉತ್ಪಾದಕರ ಜತೆ ಪೇಟೆಂಟ್ ಲೈಸೆನ್ಸ್ ಒಪ್ಪಂದ ಮಾಡಿಕೊಂಡಿದೆ.

ಕಳೆದ ವರ್ಷ ಹುವಾವೆ ಸಂಶೋಧನೆ ಹಾಗೂ ಅಭಿವೃದ್ಧಿಗೆ $23 ಬಿಲಿಯನ್ ಖರ್ಚು ಮಾಡಿದೆ. ಒಟ್ಟು 114,000 ಮಂದಿ ಉದ್ಯೋಗಿಗಳಿದ್ದು, ಈ ಪೈಕಿ ಶೇ 55 ರಷ್ಟು ಮಂದಿ ಸಂಶೋಧನೆ ಹಾಗೂ ಅಭಿವೃದ್ಧಿ ಕೆಲಸದಲ್ಲಿ ನಿರತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.