ಬೆಂಗಳೂರು: ಯುಪಿಐ ಪಾವತಿ ಸೇವೆ ನೀಡುವ ಜನಪ್ರಿಯ ಗೂಗಲ್ ಪೇ ಆಕಸ್ಮಿಕವಾಗಿ ಕೆಲ ಬಳಕೆದಾರರಿಗೆ ಸುಮಾರು ₹88 ಸಾವಿರ ಹಣ ರವಾನಿಸಿಬಿಟ್ಟಿದೆ!

ಹೌದು, ಈ ಕುರಿತು ಅನೇಕ ಗೂಗಲ್ ಪೇ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕೆಲವರಿಗೆ ಕನಿಷ್ಠ ₹100, ಇನ್ನೂ ಕೆಲವರಿಗೆ ಗರಿಷ್ಠ ₹1000 ರುಪಾಯಿ ಹಾಕಿರುವುದು ಗೊತ್ತಾಗಿದೆ. ಒಟ್ಟಾರೆ ಹೀಗೆ 88 ಸಾವಿರ ಹಣ ಗೂಗಲ್ ಪೇ ಕಡೆಯಿಂದ ಹೋಗಿದೆ ಎಂದು ತಿಳಿದು ಬಂದಿದೆ. ಈ ಹಣ ಸ್ಕ್ರ್ಯಾಚ್ ಕಾರ್ಡ್ ರೂಪದಲ್ಲಿ ಸಂದಾಯವಾಗಿದೆ.

ಯಾರಾರಿಗೆ ಆಕಸ್ಮಿಕವಾಗಿ ಹಣ ಹೋಗಿದೆಯೋ ಅವರಿಗೆ ಮೇಲ್ ಕಳಿಸಿರುವ ಗೂಗಲ್ ಪೇ, ಹಣ ಹಿಂಪಡೆಯಲಾಗುವುದು ಎಂದು ತಿಳಿಸಿದೆ. ಆದರೆ, ತಮಗೆ ಆಕಸ್ಮಿಕವಾಗಿ ಹಣ ಬಂದಿರುವುದನ್ನು ನೋಡಿದ ಕೆಲವರು ಅದನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದು ಹಾಗೂ ಇನ್ನೂ ಕೆಲವರು ಹಣವನ್ನು ವಿತ್ಡ್ರಾ ಮಾಡಿಕೊಂಡಿದ್ದು ಕೂಡ ನಡೆದಿದೆ.

ಗೂಗಲ್ ಪೇ ಹೊಸ ಅಪ್ಡೇಟ್ ನೀಡುತ್ತಿದ್ದು, ಇ ವೇಳೆ ಪ್ರಾಯೋಗಿಕವಾಗಿ ಹೊಸ ಫೀಚರ್ ನೀಡುವಲ್ಲಿ ಅಥವಾ ತಾಂತ್ರಿಕ ಅಡಚಣೆಯಿಂದ ಈ ಅಚಾತುರ್ಯ ನಡೆದಿರಬಹುದು ಎಂದು ವರದಿಯಾಗಿದೆ.

ನರಕಕ್ಕೆ ಹೋಗು ರಣಬೀರ್ ಕಪೂರ್ ಎಂದ ಉರ್ಫಿ– ಬಳಿಕ ಸ್ಪಷ್ಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.