ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನೇರ ತೆರಿಗೆ ಸಂಗ್ರಹ ಶೇ 21ರಷ್ಟು ಹೆಚ್ಚಳ

Published 18 ಜೂನ್ 2024, 16:37 IST
Last Updated 18 ಜೂನ್ 2024, 16:37 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ 2024–25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜೂನ್‌ 17ರ ವರೆಗೆ ₹4.62 ಲಕ್ಷ ಕೋಟಿ ನೇರ ತೆರಿಗೆ ನಿವ್ವಳ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಂಗ್ರಹದಲ್ಲಿ ಶೇ 21ರಷ್ಟು ಹೆಚ್ಚಳವಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಮಂಗಳವಾರ ತಿಳಿಸಿದೆ.

ಜೂನ್‌ 15ರ ವರೆಗಿನ ಮುಂಗಡ ತೆರಿಗೆ ಪಾವತಿಯಲ್ಲಿ ₹1.48 ಲಕ್ಷ ಕೋಟಿ (ಶೇ 27ರಷ್ಟು ಏರಿಕೆ) ಸಂಗ್ರಹವಾಗಿದೆ. ಇದರಲ್ಲಿ ಕಂಪನಿಗಳ ವರಮಾನ ತೆರಿಗೆ (ಸಿಐಟಿ) ₹1.14 ಲಕ್ಷ ಕೋಟಿ ಮತ್ತು ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ₹34,470 ಕೋಟಿ ಆಗಿದೆ.

ಜೂನ್‌ 17ರ ವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹ ಮೊತ್ತ ₹4.62 ಲಕ್ಷ ಕೋಟಿ ಆಗಿದೆ. ಇದರಲ್ಲಿ ಕಂಪನಿಗಳ ವರಮಾನ ತೆರಿಗೆ ₹1.80 ಲಕ್ಷ ಕೋಟಿ  ವೈಯಕ್ತಿಕ ಆದಾಯ ತೆರಿಗೆ ₹2.81 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.

₹53,322 ಕೋಟಿ ಮರುಪಾವತಿ (ರೀಫಂಡ್‌) ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 34ರಷ್ಟು ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT