ನವದೆಹಲಿ: ದೇಶದ ಷೇರುಪೇಟೆಯ ವಹಿವಾಟಿಗೆ ಸಂಬಂಧಿಸಿದಂತೆ ರೂಪಿಸಿರುವ ನಿಯಮಾವಳಿಗಳನ್ನು ಅದಾನಿ ಸಮೂಹವು ಉಲ್ಲಂಘಿಸಿದೆಯೇ ಎಂಬ ಬಗ್ಗೆ ಸತ್ಯಶೋಧನೆ ನಡೆಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮುಂದಾಗಿದೆ.

ಅಮೆರಿಕದ ನ್ಯಾಯಾಂಗ ಇಲಾಖೆ ಮತ್ತು ಸೆಕ್ಯುರಿಟೀಸ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ), ಉದ್ಯಮಿ ಗೌತಮ್ ಅದಾನಿ ವಿರುದ್ಧ ಲಂಚದ ಆರೋಪ ಮಾಡಿದೆ. ಈ ಪ್ರಕರಣದಲ್ಲಿ ಭಾರತೀಯ ಷೇರುಪೇಟೆಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆಯೇ ಎನ್ನುವ ಕುರಿತು ಪರಿಶೀಲಿಸಿ ವಿವರಣೆ ನೀಡುವಂತೆ ಷೇರು ವಿನಿಮಯ ಕೇಂದ್ರಗಳ ಅಧಿಕಾರಿಗಳಿಗೆ ಸೆಬಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ನ್ಯಾಯಾಂಗ ಇಲಾಖೆಯ ಮುಂದೆ ಅದಾನಿ ಗ್ರೀನ್ ಎನರ್ಜಿ ಕಂಪನಿಯು ಸೂಕ್ತ ಪುರಾವೆಗಳನ್ನು ನೀಡುವಲ್ಲಿ ವಿಫಲವಾಗಿದೆಯೇ ಎಂಬ ಬಗ್ಗೆಯೂ ಕೂಲಂಕಷವಾಗಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿವೆ.

ಈ ಸತ್ಯಶೋಧನಾ ಪ್ರಕ್ರಿಯೆಯು
ಎರಡು ವಾರದವರೆಗೆ ನಡೆಯಲಿದೆ. ಆ ಬಳಿಕ ಸೆಬಿಯು ಅದಾನಿ ಗ್ರೀನ್ ಎನರ್ಜಿ ವಿರುದ್ಧ ಔಪಚಾರಿಕವಾಗಿ ತನಿಖೆ ಆರಂಭಿಸುವ ಸಾಧ್ಯತೆಯಿದೆ ಎಂದು ತಿಳಿಸಿವೆ.

ಅಮೆರಿಕದ ನ್ಯಾಯಾಂಗ ಇಲಾಖೆಯಿಂದ ನಡೆಯುತ್ತಿದ್ದ ತನಿಖೆ ಬಗ್ಗೆ ಅದಾನಿ ಸಮೂಹಕ್ಕೆ ಈ ಮೊದಲೇ ಮಾಹಿತಿ ಇತ್ತು. ಅಲ್ಲಿನ ಭ್ರಷ್ಟಾಚಾರ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಬಗ್ಗೆ ಕಂಪನಿಗೆ ಸಂಬಂಧ ಇಲ್ಲದ ಮೂರನೇ ವ್ಯಕ್ತಿಯಿಂದ ತನಿಖೆ ನಡೆಯುತ್ತಿದೆ ಎಂದು ಅದಾನಿ ಗ್ರೀನ್ ಎನರ್ಜಿ ಕಂಪನಿಯು, ಮಾರ್ಚ್ 19ರಂದು ಷೇರುಪೇಟೆಗೆ ಮಾಹಿತಿ ನೀಡಿತ್ತು ಎಂದು ಮೂಲಗಳು ಹೇಳಿವೆ.

ವಿವರಣೆ ಕೋರಿಕೆ:

ಕೆನ್ಯಾ ಸರ್ಕಾರವು ವಿಮಾನ ನಿಲ್ದಾಣದ ನಿರ್ವಹಣೆ ಸಂಬಂಧ ಅದಾನಿ ಸಮೂಹದೊಟ್ಟಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸಿದೆ. ಅಮೆರಿಕದ ಕೋರ್ಟ್ನಲ್ಲಿ ಲಂಚ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣಗಳಲ್ಲಿ ಷೇರುಪೇಟೆ ನಿಯಮಾವಳಿಗಳು ಉಲ್ಲಂಘನೆಯಾಗಿವೆಯೇ ಎನ್ನುವ ಬಗ್ಗೆ ವಿವರಣೆ ನೀಡುವಂತೆ ಅದಾನಿ ಸಮೂಹಕ್ಕೆ, ಷೇರು ವಿನಿಮಯ ಕೇಂದ್ರಗಳು ಸೂಚಿಸಿವೆ.

ಒಂದು ತನಿಖೆಯಷ್ಟೇ ಬಾಕಿ

ವಾಸ್ತವಿಕ ಬೆಲೆಗಿಂತ ಶೇ 80ರಷ್ಟು ಹೆಚ್ಚು ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್ಬರ್ಗ್ ರಿಸರ್ಚ್ ಕಳೆದ ವರ್ಷದ ಜನವರಿಯಲ್ಲಿ ಆರೋಪಿಸಿತ್ತು. ಹಿಂಡನ್ಬರ್ಗ್ ಆರೋಪ ಸೇರಿದಂತೆ ಅದಾನಿ ಸಮೂಹದ ವಿರುದ್ಧ ಸೆಬಿಯು ಒಟ್ಟು 24 ತನಿಖೆಗಳನ್ನು ಕೈಗೆತ್ತಿಕೊಂಡಿತ್ತು. ಹಿಂಡನ್ಬರ್ಗ್ ಆರೋಪಕ್ಕೆ ಸಂಬಂಧಿಸಿದ ಒಂದು ತನಿಖೆಯಷ್ಟೇ ಪ್ರಗತಿಯಲ್ಲಿದೆ. ಉಳಿದ ಎಲ್ಲಾ ತನಿಖೆಗಳು ಪೂರ್ಣಗೊಂಡಿವೆ ಎಂದು ಪ್ರಸಕ್ತ ವರ್ಷದ ಆಗಸ್ಟ್ನಲ್ಲಿ ಸೆಬಿ ಹೇಳಿಕೆ ನೀಡಿತ್ತು.

ಸೆಬಿ ಅಧಿಕಾರ ಎಷ್ಟು?

ಷೇರುಪೇಟೆಯಲ್ಲಿ ನೋಂದಾಯಿತ ಹಾಗೂ ನೋಂದಾಯಿತವಲ್ಲದ ಕಂಪನಿಗಳೊಟ್ಟಿಗೆ ನಡೆಸಿರುವ ವಹಿವಾಟಿನ ಉಲ್ಲಂಘನೆ ಹಾಗೂ ಲಿಸ್ಟಿಂಗ್ ನಿಯಮಗಳ ಅನುಸರಣೆಯಲ್ಲಿ ನಿರ್ಲಕ್ಷ್ಯ ತೋರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಅಧಿಕಾರವನ್ನು ಸೆಬಿ ಹೊಂದಿದೆ.

ಈ ಬಗ್ಗೆ ಮುಂಬೈ ಷೇರು ವಿನಿಮಯ ಕೇಂದ್ರ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಿಂದ ಸಲ್ಲಿಕೆಯಾಗುವ ದೂರಿನ ಮೇರೆಗೆ ತನಿಖೆ ನಡೆಸುತ್ತದೆ.

ಅದಾನಿ ಸಮೂಹದ ವಿರುದ್ಧ ಈಗಾಗಲೇ ಪೂರ್ಣಗೊಂಡಿರುವ ತನಿಖೆಗಳ ಬಗ್ಗೆ ಸೆಬಿಯು ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ. ನಿಯಮಾವಳಿಗಳನ್ನು ಉಲ್ಲಂಘಿಸುವ ಕಂಪನಿಗಳನ್ನು ಷೇರುಪೇಟೆ ವಹಿವಾಟಿನಿಂದ ನಿರ್ಬಂಧಿಸುವ ಹಾಗೂ ದಂಡ ವಿಧಿಸುವ ಅಧಿಕಾರ ಅದಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.