ಬೆಂಗಳೂರು: ‘ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ (ಆರ್ಆರ್ಬಿ) ವಿಲೀನಕ್ಕೆ ಸಂಬಂಧಿಸಿದಂತೆ ರಾಜ್ಯಗಳು ತಮ್ಮ ಅಭಿಪ್ರಾಯ ತಿಳಿಸಬೇಕಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಗರದಲ್ಲಿ ಶನಿವಾರ ನಡೆದ ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಒಂದು ರಾಜ್ಯ; ಒಂದು ಆರ್ಆರ್ಬಿ’ ಎಂಬುದು ಸರ್ಕಾರದ ತತ್ವವಾಗಿದೆ. ಹಾಗಾಗಿ, ವಿಲೀನ ಪ್ರಸ್ತಾವ ಕುರಿತು ಅಭಿಪ್ರಾಯ ಮಂಡಿಸಬೇಕಿದೆ’ ಎಂದು ಸೂಚಿಸಿದರು.

ಗ್ರಾಮೀಣ ಪ್ರದೇಶದ ಆರ್ಥಿಕತೆ ಬೆಳವಣಿಗೆಯಲ್ಲಿ ಗ್ರಾಮೀಣ ಬ್ಯಾಂಕ್ಗಳ ಪಾತ್ರ ನಿರ್ಣಾಯಕವಾಗಿದೆ. ಸರ್ಕಾರದ ಮುದ್ರಾ, ಪಿ.ಎಂ–ವಿಶ್ವಕರ್ಮ ಸೇರಿ ಇತರೆ ಯೋಜನೆಯಡಿ ಅರ್ಹರಿಗೆ ಸೌಲಭ್ಯ ಒದಗಿಸಲು ಮುಂದಾಗಬೇಕಿದೆ ಎಂದು ಸೂಚಿಸಿದರು.

ಅಲ್ಲದೆ ಹೈನುಗಾರಿಕೆ, ಪಶುಪಾಲನೆ, ಮೀನುಗಾರಿಕೆಗೆ ಸಾಲ ಸೌಲಭ್ಯ ನೀಡಬೇಕು. ಪ್ರಾದೇಶಿಕ ವಿಭಾಗದ ವ್ಯಾಪ್ತಿಯಲ್ಲಿ ಕೃಷಿ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ನಿರ್ದೇಶನ ನೀಡಿದರು.

‘ಪ್ರಧಾನ ಮಂತ್ರಿ ಜನಧನ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಯಡಿ ಇನ್ನೂ ಹೆಚ್ಚಿನ ಗುರಿ ಸಾಧನೆ ಮಾಡಬೇಕು’ ಎಂದು ಸೂಚಿಸಿದರು.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್ಎಂಇ) ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಬೇಕು. ಗ್ರಾಹಕರಿಗೆ ಡಿಜಿಟಲ್ ಸೇವೆ ಒದಗಿಸಬೇಕು ಎಂದು ಹೇಳಿದರು.

ಬ್ಯಾಂಕ್ಗಳ ಮೈಕ್ರೊ ಎಟಿಎಂ, ಕಾಲ್ ಸೆಂಟರ್, ನೆಟ್ ಬ್ಯಾಂಕಿಂಗ್, ವಿಡಿಯೊ ಕೆವೈಸಿ, ಆರ್ಟಿಜಿಎಸ್ ಸೇರಿ ಡಿಜಿಟಲ್ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಿರುವ ಬಗ್ಗೆ ನಿರ್ಮಲಾ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಇದ್ದರು.

₹3816 ಕೋಟಿ ನಿವ್ವಳ ಲಾಭ

‘2023–24ನೇ ಆರ್ಥಿಕ ವರ್ಷದಲ್ಲಿ ದಕ್ಷಿಣ ವಲಯದ ಗ್ರಾಮೀಣ ಬ್ಯಾಂಕ್ಗಳು ಉತ್ತಮ ಗುರಿ ಸಾಧನೆ ಮಾಡಿವೆ. ಬ್ಯಾಂಕ್ಗಳ ಸುರಕ್ಷತೆಯ ಮಾನದಂಡವಾದ ಬಂಡವಾಳ ಪರ್ಯಾಪ್ತತಾ ಅನುಪಾತ (ಸಿಆರ್ಎಆರ್) ಶೇ 17.6ರಷ್ಟಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣ (ಜಿಎನ್ಪಿಎ) ಶೇ 3.94ರಷ್ಟಿದೆ’ ಎಂದು ಸಚಿವ ನಿರ್ಮಲಾ ಹೇಳಿದರು. ಆಂಧ್ರಪ್ರದೇಶ ಕರ್ನಾಟಕ ಕೇರಳ ತಮಿಳುನಾಡು ತೆಲಂಗಾಣ ಮತ್ತು ಪುದುಚೇರಿಯಲ್ಲಿರುವ ಬ್ಯಾಂಕ್ಗಳು ₹3816 ಕೋಟಿ ನಿವ್ವಳ ಲಾಭಗಳಿಸಿವೆ. ಇದು ದೇಶದಲ್ಲಿರುವ ಉಳಿದ ಎಲ್ಲಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ಲಾಭದ ಅರ್ಧದಷ್ಟಿದೆ ಎಂದು ವಿವರಿಸಿದರು. ಬ್ಯಾಂಕ್ಗಳಲ್ಲಿ ಇರುವ ಚಾಲ್ತಿ ಮತ್ತು ಉಳಿತಾಯ ಖಾತೆಗಳ ಠೇವಣಿ ಮೊತ್ತದ ಹೆಚ್ಚಳಕ್ಕೆ ಒತ್ತು ನೀಡಬೇಕು. ಇದು ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ನೆರವಾಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.