ನವದೆಹಲಿ: ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಎಂಡಿಎಚ್ ಹಾಗೂ ಎವರೆಸ್ಟ್ ಕಂಪನಿಗಳ ಸಂಬಾರ ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಅಂಶ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ 'ಪಿಟಿಐ’ ವರದಿ ಮಾಡಿದೆ.

ಎವರೆಸ್ಟ್ ಕಂಪನಿಯ ಎರಡು ತಯಾರಿಕಾ ಘಟಕದಿಂದ 9 ಮಾದರಿಗಳು ಮತ್ತು ಎಂಡಿಎಚ್‌ಗೆ ಸೇರಿದ 11 ತಯಾರಿಕಾ ಘಟಕಗಳಿಂದ 25 ಮಾದರಿಗಳನ್ನು ಸಂಗ್ರಹಿಸಲಾಗಿತ್ತು. 34 ಮಾದರಿಗಳ ಪೈಕಿ 28 ಮಾದರಿಗಳ ಫಲಿತಾಂಶ ಹೊರಬಿದ್ದಿದ್ದು, ಎಥಿಲೀನ್ ಆಕ್ಸೈಡ್ ಅಂಶ ಪತ್ತೆಯಾಗಿಲ್ಲ. ಉಳಿದಂತೆ ಆರು ಮಾದರಿಗಳ ವರದಿ ಇನ್ನಷ್ಟೇ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ.

ಪ್ರಯೋಗಾಲಯ ವರದಿಗಳನ್ನು ಎಫ್‌ಎಸ್‌ಎಸ್‌ಎಐ ಸಮಿತಿಯು ಪರಿಶೀಲಿಸಿದ್ದು, ಮಾದರಿಗಳಲ್ಲಿ ಎಥಿಲೀನ್ ಆಕ್ಸೈಡ್‌ನ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಎಂಡಿಎಚ್‌ನ ಮದ್ರಾಸ್ ಕರಿ ಪೌಡರ್, ಸಂಬಾರ್ ಮಿಕ್ಸ್ಡ್ ಮಸಾಲ ಪೌಡರ್, ಮಿಕ್ಸ್ಡ್ ಮಸಾಲ ಕರಿ ಪೌಡರ್ ಹಾಗೂ ಎವರೆಸ್ಟ್‌ನ ಫಿಶ್ ಕರಿ ಮಸಾಲದಲ್ಲಿ ಕೀಟನಾಶಕ ಅಂಶವಿದೆ ಎಂಬ ಆರೋಪದ ಮೇರೆಗೆ ಹಾಂಗ್‌ಕಾಂಗ್ ಹಾಗೂ ಸಿಂಗಪುರದಲ್ಲಿ ಈ ಪದಾರ್ಥಗಳ ಖರೀದಿ ಮತ್ತು ಮಾರಾಟಕ್ಕೆ ಒಂದು ತಿಂಗಳ ಹಿಂದೆ ನಿಷೇಧ ಹೇರಲಾಗಿತ್ತು. ಕಳೆದ ವಾರ ನೆರೆಯ ನೇಪಾಳದಲ್ಲಿಯೂ ನಿಷೇಧ ವಿಧಿಸಲಾಗಿದೆ.

ಏಪ್ರಿಲ್ 22ರಂದು ದೇಶದಾದ್ಯಂತ ಎರಡು ಕಂಪನಿಗಳಿಗೆ ಸೇರಿದ ಸಂಬಾರ ಪದಾರ್ಥಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವಂತೆ ಆಹಾರ ಆಯುಕ್ತರಿಗೆ ಎಫ್‌ಎಸ್‌ಎಸ್‌ಎಐ ಸೂಚಿಸಿತ್ತು.

‘ಅಲ್ಲದೆ, ಮಾರುಕಟ್ಟೆಯಲ್ಲಿ ಇರುವ ಇತರೆ ಬ್ರ್ಯಾಂಡ್‌ಗಳ 300ಕ್ಕೂ ಹೆಚ್ಚು ಸಂಬಾರ ಪದಾರ್ಥಗಳ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅವುಗಳಲ್ಲಿಯೂ ಕೀಟನಾಶಕ ಅಂಶ ಪತ್ತೆಯಾಗಿಲ್ಲ’ ಎಂದು ತಿಳಿಸಿವೆ.
.ದೇಶದ ಸಂಬಾರ ಪದಾರ್ಥಗಳ ರಫ್ತು ಶೇ 40ರಷ್ಟು ಇಳಿಕೆ: ಆತಂಕ.MDH, ಎವರೆಸ್ಟ್ ಪದಾರ್ಥದಲ್ಲಿ ಕೀಟನಾಶಕ ಪತ್ತೆ ಪ್ರಕರಣ: ನೇಪಾಳದಲ್ಲೂ ನಿಷೇಧ.ಕೀಟನಾಶಕ: ನ್ಯೂಜಿಲೆಂಡ್ನಲ್ಲೂ MDH, ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರಿಶೀಲನೆ.ಈಸ್ಟರ್ನ್ ಧನಿಯಾ ಪುಡಿ ಬಳಕೆ ಅಸುರಕ್ಷಿತ; FSSAI ಎಚ್ಚರಿಕೆ.ಆಹಾರ ಪದಾರ್ಥಗಳಲ್ಲಿ ಕೀಟನಾಶಕ ಅಂಶ: ಮಾನದಂಡ ಪಾಲನೆ ಆಗುತ್ತಿದೆ ಎಂದ FSSAI.ಪತ್ರಿಕೆಗಳಲ್ಲಿ ಆಹಾರ ಕೊಡುವುದನ್ನು ನಿಲ್ಲಿಸುವಂತೆ ಮಾರಾಟಗಾರರಿಗೆ FSSAI ತಾಕೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.