ನವದೆಹಲಿ: ರಾಷ್ಟ್ರದಾದ್ಯಂತಲಾಕ್ಡೌನ್ ಜಾರಿಯಾದ ಕಾರಣ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿಸರ್ಕಾರಪೆಟ್ರೋಲ್
ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ್ದು ಇದರಿಂದಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹1.6 ಲಕ್ಷ ಕೋಟಿ ಆದಾಯ
ಗಳಿಸುವುದೆಂದುನಿರೀಕ್ಷಿಸಲಾಗಿದೆ.

ಮಂಗಳವಾರ ಸರ್ಕಾರವು ಪೆಟ್ರೋಲ್ನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ₹10, ಡೀಸೆಲ್ ಲೀಟರ್ಗೆ ₹13 ಹೆಚ್ಚಿಸಿದೆ.
ಅಂತರರಾಷ್ಟ್ರೀಯ ತೈಲ ಬೆಲೆಗಳು ಎರಡು ದಶಕಗಳ ಕನಿಷ್ಟಮಟ್ಟಕ್ಕೆ ಇಳಿದಿರುವುದರಿಂದಇದರ ಲಾಭವನ್ನು ಸರ್ಕಾರ
ಪಡೆಯಲಿದೆ. ಇದು ಎರಡು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರಎರಡನೇ ಅವಧಿಗೆ ಅಬಕಾರಿ ಸುಂಕಏರಿಕೆ ಮಾಡಿದೆ.

ಕೊರೋನ ಸೋಂಕು ಪರಿಣಾಮ ಲಾಕ್ಡೌನ್ ವಿಧಿಸಿರುವ ಪ್ರಯಾಣದ ನಿರ್ಬಂಧದಿಂದಾಗಿ ಬಳಕೆಯ ಕುಸಿತವನ್ನು ಗಮನಿಸಿದರೆ,
ಪ್ರಸಕ್ತ ಹಣಕಾಸು ವರ್ಷದ ಉಳಿದ 11 ತಿಂಗಳಲ್ಲಿ(ಏಪ್ರಿಲ್ 2020 ರಿಂದ ಮಾರ್ಚ್ 2021 ರವರೆಗೆ) ಲಾಭ ₹1.6 ಲಕ್ಷ ಕೋಟಿ ಗಳಿಸಲು ಸಹಾಯವಾಗಲಿದೆ ಎನ್ನಲಾಗಿದೆ.ಮಾರ್ಚ್ 14ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ₹3 ಹೆಚ್ಚಳದಿಂದ ವಾರ್ಷಿಕ ಆದಾಯ ₹39,000ಕೋಟಿ ಎಂದು ನಿರೀಕ್ಷಿಸಲಾಗಿತ್ತು. ಈಗ ಅತಿ ಹೆಚ್ಚು ಅಂದರೆ ₹10 ಏರಿಕೆ ಮಾಡಿರುವುದರಿಂದ ಸರ್ಕಾರವು ವಾರ್ಷಿಕ ₹2ಲಕ್ಷ ಕೋಟಿ ಆದಾಯಗಳಿಸಲಿದೆ ಎನ್ನಲಾಗಿದೆ.

ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್,ಭಾರತ್ಪೆಟ್ರೋಲಿಯಂಕಾರ್ಪೊರೇಷನ್ ಲಿಮಿಟೆಡ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಮಾರ್ಚ್ 16ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರಲಿಲ್ಲ. ಇಳಿಸಲೂ ಇರಲಿಲ್ಲ. ಈ ಸಂಬಂಧ ಸರ್ಕಾರದ ತೀರ್ಮಾನಕ್ಕಾಗಿ ನಿರೀಕ್ಷಿಸುತ್ತಿದ್ದವು. ಸರ್ಕಾರ ಈಗ₹10 ಅಬಕಾರಿ ಸುಂಕ ಏರಿಕೆ ಮಾಡಿದೆ. ಇದಲ್ಲದೆ, ಅಂತರರಾಷ್ಟ್ರೀಯ ತೈಲ ಬೆಲೆಗಳು ನಿರಂತರವಾಗಿ ಇಳಿಕೆ ಕಂಡಿದ್ದು, ಒಂದು ಬ್ಯಾರೆಲ್ ಗೆ 18 ಡಾಲರ್ ಇಳಿದಿದೆ. ಇದು 1999ರಿಂದ ಇಲ್ಲಿಯವರೆಗೆ ಕನಿಷ್ಟ ದರವಾಗಿದೆ. ಇದರಿಂದಾಗಿ ಇದರ ಲಾಭಾಂಶವನ್ನೂ ಸರ್ಕಾರ ಹಾಗೂ ಸಂಸ್ಥೆಗಳು ಪಡೆಯಲಿವೆ.

ಅಬಕಾರಿ ಸುಂಕದ ಹೆಚ್ಚಳ ಕುರಿತು ಮೂಡಿಸ್ ಇನ್ವೆಸ್ಟರ್ಸ್ಕಾರ್ಪೊರೇಟ್ ಸಂಸ್ಥೆಯಹಿರಿಯ ಉಪಾಧ್ಯಕ್ಷ ವಿಕಾಸ್ಹಲಾನ್ ಪ್ರತಿಕ್ರಿಯೆ ನೀಡಿ,ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯನ್ನು ಕ್ರಮವಾಗಿ ಬ್ಯಾರೆಲ್ಗೆ 21 ಡಾಲರ್, 27 ಡಾಲರ್ ಹೆಚ್ಚಳ ಮಾಡಿರುವುದರಿಂದ ಸರ್ಕಾರದ ತೆರಿಗೆ ಸಂಗ್ರಹಕ್ಕೆಕಾರಣವಾಗುತ್ತದೆ. ತೆರಿಗೆ ಹೆಚ್ಚಳವನ್ನು ಪೂರ್ಣ ವರ್ಷಕ್ಕೆ ಕಾಪಾಡಿಕೊಂಡರೆ ಸುಮಾರು 21ಶತಕೋಟಿ ಡಾಲರ್ಗಳಷ್ಟು ಹೆಚ್ಚಾಗುತ್ತದೆ ಎಂದರು.ಸರ್ಕಾರದ ಈ ಏರಿಕೆಯಿಂದ ದೇಶದ ತೈಲ ಮಾರುಕಟ್ಟೆ ಕಂಪನಿಗಳನ್ನು ಸರ್ಕಾರಆರ್ಥಿಕವಾಗಿ ಬಲಪಡಿಸಿದಂತಾಗಿದೆ. ತೆರಿಗೆ ಹೆಚ್ಚಳವು ತೈಲ ಮಾರುಕಟ್ಟೆ ಕಂಪನಿಗಳಿಗೆ ಹೆಚ್ಚಿನಕಾರ್ಯನಿರತ ಬಂಡವಾಳದ ಹೊರಹರಿವಿಗೆ ಕಾರಣವಾಗಬಹುದು ಎನ್ನಲಾಗಿದೆ.

ಕೇಂದ್ರ ಪರೋಕ್ಷ ತೆರಿಗೆ ಅಬಕಾರಿ ಸುಂಕ ಮಂಡಳಿಯು ನೀಡಿದ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿಸುಂಕವನ್ನು ಲೀಟರ್ಗೆ ₹2 ಹೆಚ್ಚಿಸಲಾಗಿದೆ, ರಸ್ತೆ ಸೆಸ್ ಅನ್ನು ಲೀಟರ್ಗೆ ₹8ಗೆ ಹೆಚ್ಚಿಸಲಾಗಿದೆ. ಡೀಸೆಲ್ಗೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನುಲೀಟರ್ಗೆ ₹5 ಹೆಚ್ಚಿಸಲಾಗಿದೆ, ರಸ್ತೆ ಸೆಸ್ ಅನ್ನು ಲೀಟರ್ಗೆ ₹8 ಹೆಚ್ಚಿಸಿದೆ.ಇದರೊಂದಿಗೆ, ಪೆಟ್ರೋಲ್ನ ಒಟ್ಟು ಅಬಕಾರಿ ಸುಂಕವು ಪ್ರತಿ ಲೀಟರ್ಗೆ ₹32.98 ಮತ್ತು ಡೀಸೆಲ್ನಲ್ಲಿ ₹31.83 ಏರಿಕೆಯಾದಂತಾಗಿದೆ. ದೆಹಲಿಯಲ್ಲಿ ಪೆಟ್ರೋಲ್ಗೆ ₹71.26, ಒಂದು ಲೀಟರ್ ಡೀಸೆಲ್ ₹69.39ಕೇಂದ್ರ ಅಬಕಾರಿ ಸುಂಕವು ಈಗ ಶೇಕಡಾ 46 ರಷ್ಟು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೊಂದಿದೆ. ಸ್ಥಳೀಯ ಮಾರಾಟ ತೆರಿಗೆಅಥವಾ ವ್ಯಾಟ್ ಅನ್ನು ಪರಿಗಣಿಸಿದ ನಂತರ, ಬೆಲೆಯಲ್ಲಿನ ಒಟ್ಟು ತೆರಿಗೆ ಪ್ರಮಾಣವು ಶೇಕಡಾ 60 ರಷ್ಟಿದೆ.

2014ರಲ್ಲಿ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆ ಲೀಟರ್ಗೆ ₹9.48,
ಡೀಸೆಲ್ ಮೇಲೆ ಲೀಟರ್ ₹3.56 ಆಗಿದೆ.ಜಾಗತಿಕ ತೈಲ ಬೆಲೆಗಳು ಕುಸಿಯುವುದರಿಂದ ಉಂಟಾಗುವ ಲಾಭಗಳನ್ನು ಪಡೆಯಲು ಸರ್ಕಾರವು ನವೆಂಬರ್ 2014, ಜನವರಿ 2016ರ ನಡುವೆ ಒಂಬತ್ತು ಸಂದರ್ಭಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು.

ಒಟ್ಟಾರೆಯಾಗಿ, ಪೆಟ್ರೋಲ್ ದರದ ಸುಂಕವನ್ನು ಪ್ರತಿ ಲೀಟರ್ಗೆ ₹11.77 ಏರಿಸಲಾಯಿತು, 15 ತಿಂಗಳಲ್ಲಿ
ಡೀಸೆಲ್ಗೆ ₹13.47 ರಷ್ಟು ಏರಿಕೆಯಾಗಿದೆ. ಇದು ಸರ್ಕಾರದ ಅಬಕಾರಿ ಮೊತ್ತವನ್ನು 2016-17ರಲ್ಲಿ ದ್ವಿಗುಣವಾಗಿ ₹2,42,
000 ಕೋಟಿ ಹೆಚ್ಚಿಸಲು ಸಹಾಯ ಮಾಡಿತು. 2014-15ರಲ್ಲಿ ಅಬಕಾರಿ ಆದಾಯ₹99,000 ಕೋಟಿ ಇತ್ತು.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು, ಅಬಕಾರಿ ಸುಂಕ ಹೆಚ್ಚಳಕ್ಕೆ ಪೂರ್ವಸಿದ್ಧತೆಯಾಗಿ, ಸಂಸತ್ತಿನ ಬಜೆಟ್ಅಧಿವೇಶನದ ಕೊನೆಯಲ್ಲಿ ಪೆಟ್ರೋಲ್ ಮತ್ತುಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ತಲಾ ₹8 ಹೆಚ್ಚಿಸಲು ಅನುಮತಿ ಪಡೆದರು.ಸಚಿವೆ ಸೀತಾರಾಮನ್ ಅವರು 2020ರ ಹಣಕಾಸು ಮಸೂದೆಗೆ ತಿದ್ದುಪಡಿ ಮಾಡುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷಅಬಕಾರಿ ಸುಂಕವನ್ನು ಕ್ರಮವಾಗಿ ಲೀಟರ್ಗೆ ₹18, ಲೀಟರ್ಗೆ ₹12ಗೆ ಹೆಚ್ಚಿಸಿತು.ಆರ್ಥಿಕ ಸಂಕಷ್ಟ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆದಾಯ ಹೆಚ್ಚಿಸಲು ಅಬಕಾರಿ ಸುಂಕ ಹೆಚ್ಚಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.