ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಭಾರತಕ್ಕೆ ಬೆಳ್ಳುಳ್ಳಿ ಪೂರೈಕೆ ಮೇಲೆ ಪರಿಣಾಮ ಬೀರಿದೆ.

ಸದ್ಯ ಸಗಟು ದರವು ಕೆ.ಜಿಗೆ ₹250ರಿಂದ ₹450 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ‘ಎ’ ಗ್ರೇಡ್ ಬೆಳ್ಳುಳ್ಳಿ ಧಾರಣೆಯು ₹500 ದಾಟಿದೆ.

‘ಮಧ್ಯಪ್ರದೇಶದಿಂದ ಮಾತ್ರವೇ ಬೆಂಗಳೂರಿನ ಮಾರುಕಟ್ಟೆಗೆ ಬೆಳ್ಳುಳ್ಳಿ ಪೂರೈಕೆಯಾಗುತ್ತಿದೆ. ವಾರಕ್ಕೊಮ್ಮೆ ಅಫ್ಗಾನಿಸ್ತಾನದಿಂದ 20ರಿಂದ 30 ಟನ್ ಪೂರೈಕೆಯಾಗುತ್ತಿದೆ. ಇದು ಇಲ್ಲಿನ ಬೇಡಿಕೆಗೆ ಸಾಕಾಗುವುದಿಲ್ಲ’ ಎಂದು ಬೆಂಗಳೂರಿನ ಗುಜರಾತ್ ಟ್ರೇಡರ್ಸ್ನ ವರ್ತಕ ಜುಬೇರ್ ತಿಳಿಸಿದರು.

‘ಪಶ್ಚಿಮ ಏಷ್ಯಾ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಹಡಗಿನ ಮೂಲಕ ಸರಕು ಸಾಗಣೆಗೆ ಅಡ್ಡಿಯಾಗಿದೆ. ಇದರಿಂದ ಇರಾನ್ನಿಂದ ಬೆಳ್ಳುಳ್ಳಿ ಪೂರೈಕೆಯು ಸಂಪೂರ್ಣ ಸ್ಥಗಿತಗೊಂಡಿದೆ’ ಎಂದರು. ‘ರಾಜಸ್ಥಾನ ಮತ್ತು ಗುಜರಾತ್ನಲ್ಲಿ ರೈತರ ಬಳಿ ಸರಕು ಇಲ್ಲ. ಹಾಗಾಗಿ, ಮಧ್ಯಪ್ರದೇಶದಿಂದ ಪೂರೈಕೆಯಾಗುವ ಬೆಳ್ಳುಳ್ಳಿಯನ್ನಷ್ಟೇ ನಂಬಿಕೊಳ್ಳುವಂತಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.