ನವದೆಹಲಿ: ಗ್ರಾಹಕರ ದೂರುಗಳಿಗೆ ಇಟಾಲಿಯನ್ ಕಾರು ತಯಾರಿಕಾ ಕಂಪನಿ ಲ್ಯಾಂಬೋರ್ಗಿನಿ ಸ್ಪಂದಿಸದೆ ಅಹಂಕಾರ ತೋರುತ್ತಿದೆ ಎಂದು ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಕಿಡಿಕಾರಿದ್ದಾರೆ.

ಗೌತಮ್ ಅವರು ತಮ್ಮ ಲ್ಯಾಂಬೋರ್ಗಿನಿ ರೆವಲ್ಟೊ ಕಾರು ತಾಂತ್ರಿಕ ದೋಷದಿಂದಾಗಿ ಮುಂಬೈನ ಟ್ರಾನ್ಸ್ ಹಾರ್ಬರ್ ಲಿಂಕ್ ಬಳಿ ಕೆಟ್ಟು ನಿಂತ ಬಗ್ಗೆ ಈ ಹಿಂದೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.

ಈ ಬಗ್ಗೆ ಕಂಪನಿ ಪ್ರತಿಕ್ರಿಯಿಸಲಿಲ್ಲ ಎಂದಿರುವ ಅವರು, ಮತ್ತೊಂದು ಪೋಸ್ಟ್ ಹಂಚಿಕೊಂಡು ‘ಲ್ಯಾಂಬೋರ್ಗಿನಿಯ ಭಾರತದ ಮುಖ್ಯಸ್ಥ ಶರದ್ ಅಗರ್ವಾಲ್ ಮತ್ತು ಏಷ್ಯಾ ಮುಖ್ಯಸ್ಥ ಫ್ರಾನ್ಸೆಸ್ಕೊ ಸ್ಕಾರ್ಡಾವೊನಿ ಅವರ ದುರಹಂಕಾರದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಗ್ರಾಹಕರ ಸಮಸ್ಯೆಗಳೇನು ಎಂಬುದನ್ನು ಪರಿಶೀಲಿಸಲು ಯಾರೂ ಸಂಪರ್ಕಿಸಲಿಲ್ಲ. ಭಾರತದ ಮುಖ್ಯಸ್ಥ ಶರದ್ ಅವರು ಕೂಡ ನಿಷ್ಠಾವಂತ ಗ್ರಾಹಕರಿಗೆ ಕನಿಷ್ಠ ಪಕ್ಷ ದೂರವಾಣಿ ಕರೆ ಮಾಡಿ ವಿಚಾರಿಸದಿರುವುದು ಆಘಾತಕಾರಿಯಾಗಿದೆ. ಬ್ರ್ಯಾಂಡ್ ದುರಹಂಕಾರವು ಮತ್ತೊಂದು ಹಂತಕ್ಕೆ ಹೋಗುತ್ತಿದೆಯೇ?’ ಎಂದು ಬರೆದುಕೊಂಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಹೊಸ ಲ್ಯಾಂಬೊರ್ಗಿನಿ ರೆವಲ್ಟೊವನ್ನು ಟೆಸ್ಟ್ ಡ್ರೈವ್ಗಾಗಿ ತೆಗೆದುಕೊಂಡು ಹೋದಾಗ ವಿದ್ಯುತ್ ವೈಫಲ್ಯದಿಂದ ಟ್ರಾನ್ಸ್ ಹಾರ್ಬರ್ ಲಿಂಕ್ ಬಳಿ ಕಾರು ಕೆಟ್ಟು ನಿಂತ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ‘ಇದು ಹೊಚ್ಚಹೊಸ ಕಾರು. ಖರೀದಿಸಿದ 15 ದಿನಗಳಲ್ಲೇ ಸಮಸ್ಯೆ ಎದುರಾಗಿದೆ. ಈ ರೀತಿ ಇನ್ನೂ ಎರಡು ಕಾರುಗಳಲ್ಲಿ ದೋಷ ಉಂಟಾಗಿರುವ ಬಗ್ಗೆ ಕೇಳಿದ್ದೇನೆ. ಹೀಗಿದ್ದರೂ ಈ ಕಾರುಗಳು ವಿಶ್ವಾಸಾರ್ಹವೇ?’ ಎಂದು ಕೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.