ಮುಂಬೈ: ದೇಶದಲ್ಲಿ ಹರಳು ಮತ್ತು ಚಿನ್ನಾಭರಣ ರಫ್ತು ನವೆಂಬರ್‌ನಲ್ಲಿ ಶೇ 4.52ರಷ್ಟು ಕುಸಿತ ಕಂಡಿದ್ದು, ₹19,018 ಕೋಟಿಗೆ ತಲುಪಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ₹19,917 ಕೋಟಿ ಮೌಲ್ಯದ ಹರಳು ಮತ್ತು ಚಿನ್ನಾಭರಣ ರಫ್ತು ಆಗಿತ್ತು. ಪೂರೈಕೆ ಸರಪಳಿಯಲ್ಲಿ ಎದುರಾಗಿರುವ ತೊಂದರೆಯೇ ಇಳಿಕೆಗೆ ಕಾರಣವಾಗಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ತಿಳಿಸಿದೆ.

‘ವಿಶ್ವದ ಕೆಲವು ದೇಶದಲ್ಲಿ ತಲೆದೋರಿರುವ ಬಿಕ್ಕಟ್ಟು ಹಾಗೂ ಬೇಡಿಕೆಯ ಕೊರತೆಯಿಂದಾಗಿ ಚಿನ್ನಾಭರಣ ವಲಯವು ಅಕ್ಟೋಬರ್ 15ರಿಂದ ಡಿಸೆಂಬರ್ 15ರವರೆಗೆ ಒರಟು ವಜ್ರಗಳ ಆಮದನ್ನು ಸ್ಥಗಿತಗೊಳಿಸಿತ್ತು. ಮುಂಬರುವ ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಾಗಲಿದ್ದು, ರಫ್ತು ಸುಧಾರಣೆಗೆ ಉತ್ತೇಜನ ನೀಡಲಿದೆ’ ಎಂದು ಮಂಡಳಿಯ ಮುಖ್ಯಸ್ಥ ವಿಪುಲ್ ಶಾ ತಿಳಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ವಲಯದ ಪ್ರಗತಿಯು ಸುಧಾರಿಸುವ ನಿರೀಕ್ಷೆಯಿದೆ. ಇದು 2024ರಲ್ಲಿ ರಫ್ತು ಹೆಚ್ಚಳಕ್ಕೆ ನೆರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವೆಂಬರ್‌ನಲ್ಲಿ ಕಟ್ ಹಾಗೂ ಪಾಲಿಷ್ ಮಾಡಿದ ವಜ್ರಗಳ ರಫ್ತು ಶೇ 9.65ರಷ್ಟು ಇಳಿಕೆಯಾಗಿದ್ದು, ₹9,217.88 ಕೋಟಿಗೆ ತಲುಪಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ₹10,202.54 ಕೋಟಿ ಇತ್ತು.

ಆದರೆ, ಈ ಅವಧಿಯಲ್ಲಿ ಒಟ್ಟಾರೆ ಚಿನ್ನಾಭರಣದ ರಫ್ತು ಶೇ 9.2ರಷ್ಟು ಹೆಚ್ಚಾಗಿದ್ದು, ₹6,724.95 ಕೋಟಿಗೆ ತಲುಪಿದೆ. ಹಿಂದಿನ ಇದೇ ಅವಧಿಯಲ್ಲಿ ₹6,158.56 ಕೋಟಿ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.