ಮುಂಬೈ: ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಅಕ್ಟೋಬರ್ನಲ್ಲಿ ದೇಶದ ಹರಳು ಮತ್ತು ಚಿನ್ನಾಭರಣಗಳ ರಫ್ತು ಪ್ರಮಾಣ ಶೇ 9ರಷ್ಟು ಏರಿಕೆಯಾಗಿದೆ. ರಫ್ತು ಮೌಲ್ಯವು ₹25,194 ಕೋಟಿ ಆಗಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ರಫ್ತು ಮೌಲ್ಯ ₹22,857 ಕೋಟಿ ಆಗಿತ್ತು ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿ (ಜಿಜೆಇಪಿಸಿ) ಶುಕ್ರವಾರ ತಿಳಿಸಿದೆ.

ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳ ರಫ್ತು ಮೌಲ್ಯ ₹11,795 ಕೋಟಿ ಆಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ₹10,495 ಕೋಟಿ ಆಗಿತ್ತು.

ಚಿನ್ನಾಭರಣಗಳ ರಫ್ತು ಶೇ 9ರಷ್ಟು ಏರಿಕೆಯಾಗಿದ್ದು, ₹9,449 ಕೋಟಿಯಷ್ಟಾಗಿದೆ. ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರಗಳ ರಫ್ತು ಮೌಲ್ಯ ₹1,160 ಕೋಟಿ ಆಗಿದೆ ಎಂದು ತಿಳಿಸಿದೆ.

‘ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದಾರೆ. ಅಮೆರಿಕದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಇದು ಜಾಗತಿಕವಾಗಿ ವ್ಯಾಪಾರ ವಹಿವಾಟಿನ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಹರಳು ಮತ್ತು ಚಿನ್ನಾಭರಣದ ಬೇಡಿಕೆಯನ್ನು ಹೆಚ್ಚಿಸಲಿದೆ’ ಎಂದು ಜಿಜೆಇಪಿಸಿ ಅಧ್ಯಕ್ಷ ವಿಪುಲ್ ಶಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.