ಮುಂಬೈ: ಆರ್ಥಿಕವಾಗಿ ನಷ್ಟದಲ್ಲಿ ಇರುವ ‘ಗೋ ಫಸ್ಟ್’ ವಿಮಾನಯಾನ ಕಂಪನಿಯ ಕಾರ್ಯಾಚರಣೆ ಪುನರಾರಂಭಿಸಲು ಅನುಕೂಲ ಆಗುವಂತೆ ₹450 ಕೋಟಿ ಮಧ್ಯಂತರ ನೆರವು ನೀಡಲು ಬ್ಯಾಂಕ್‌ಗಳು ಒಪ್ಪಿಗೆ ನೀಡಿವೆ ಎಂದು ಬ್ಯಾಂಕಿಂಗ್ ಮೂಲಗಳು ಹೇಳಿವೆ.

ಈ ಮಧ್ಯಂತರ ನೆರವಿನ ಮೊತ್ತವು ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದ ವೆಚ್ಚದ ಭಾಗವಾಗಿದೆ. ಇತರೆ ಬಾಕಿಗಳಿಗೆ ನೀಡುವಷ್ಟೇ ಆದ್ಯತೆಯನ್ನು ಈ ಮೊತ್ತಕ್ಕೂ ನೀಡಬೇಕು ಎಂದು ಬ್ಯಾಂಕ್‌ನ ಒಂದು ಮೂಲವು ತಿಳಿಸಿದೆ.

ಕಂಪನಿಯಲ್ಲಿ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡುವ ಆಲೋಚನೆ ಇಲ್ಲ ಎನ್ನುವ ಸೂಚನೆಯನ್ನು ಪ್ರವರ್ತಕರು ನೀಡಿರುವುದಾಗಿ ಹೇಳಿವೆ.

ಕಂಪನಿಗೆ ಸಾಲ ನೀಡಿರುವುದರಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್ ಮತ್ತು ಡಾಯಿಷ್ ಬ್ಯಾಂಕ್ ಪ್ರಮುಖವಾಗಿವೆ. ಬ್ಯಾಂಕ್‌ಗಳಿಗೆ ಕಂಪನಿಯು ₹6,521 ಕೋಟಿ ಬಾಕಿ ಉಳಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.