ನವದೆಹಲಿ: ರಾಜಿ ತೆರಿಗೆ (ಕಂಪೋಸಿಷನ್) ಆಯ್ಕೆ ಮಾಡಿಕೊಂಡವರಿಗೆ ವಾರ್ಷಿಕ ಜಿಎಸ್‌ಟಿ ರಿಟರ್ನ್ ಸಲ್ಲಿಕೆಯ ಗಡುವನ್ನು ಆಗಸ್ಟ್ ಅಂತ್ಯದವರೆಗೆ ವಿಸ್ತರಿಸಲಾಗಿದೆ.

2019–20ನೇ ಸಾಲಿನ ‘ಜಿಎಸ್‌ಟಿಆರ್–4’ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಜುಲೈ 15ರ ಬದಲಿಗೆ ಆಗಸ್ಟ್ 31ಕ್ಕೆ ವಿಸ್ತರಿಸಲಾಗಿದೆ. ಈ ಸಂಬಂಧ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಅಧಿಸೂಚನೆ ಹೊರಡಿಸಿದೆ.

ವಾರ್ಷಿಕ ₹1.5 ಕೋಟಿಗಿಂತ ಕಡಿಮೆ ವಹಿವಾಟು ನಡೆಸುವವರು ಜಿಎಸ್‌ಟಿ ಕಂಪೊಸಿಷನ್ ಸ್ಕೀಮ್ ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಯಡಿ ಸರಕುಗಳ ತಯಾರಕರು ಮತ್ತು ವರ್ತಕರು ಶೇ 1ರಷ್ಟು ಜಿಎಸ್‌ಟಿ ಪಾವತಿಸಬಹುದು. ಮದ್ಯ ಸರಬರಾಜು ಮಾಡದ ರೆಸ್ಟೊರೆಂಟ್‌ಗಳಿಗೆ ಇದು ಶೇ 5ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.