ನವದೆಹಲಿ:ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದ (ಎಐ) ಶೇ 100ರಷ್ಟು ಪಾಲು ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಏರ್ ಇಂಡಿಯಾ ಜತೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಶೇ 50ರಷ್ಟು ಪಾಲುದಾರಿಕೆ ಹೊಂದಿರುವ ಏರ್ ಇಂಡಿಯಾ ಎಸ್‌ಎಟಿಎಸ್ ಏರ್‌ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮಾರಾಟಕ್ಕೂ ಸರ್ಕಾರ ಮುಂದಾಗಿದ್ದು, ಬಿಡ್ ಮಾಡಲು ಆಹ್ವಾನಿಸಿದೆ.

ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡೂ ಸಂಸ್ಥೆಗಳ ಒಟ್ಟು ಸಾಲ ₹ 60,074 ಕೋಟಿ ಇದೆ. ಬಿಡ್ ಮಾಡಿ ಖರೀದಿಸುವವರು ₹ 23,286 ಕೋಟಿ ಸಾಲ ಹೊರ ಬೇಕಾಗುತ್ತದೆ. ಉಳಿದ ₹ 27,000 ಕೋಟಿ ಸಾಲವನ್ನು ಸರ್ಕಾರ ಭರಿಸಲಿದೆ.

'ಅರ್ನ್ಸ್ಟ್ ಆ್ಯಂಡ್ ಯಂಗ್' ಬಿಡ್ ಪ್ರಕ್ರಿಯೆಯ ವಹಿವಾಟು ನಿರ್ವಹಿಸುತ್ತಿದ್ದು, ಮಾರ್ಚ್ 17 ಬಿಡ್ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಬಿಡ್‌ನ ಅಂತಿಮ ಫಲಿತಾಂಶ ಮಾರ್ಚ್ 31ರೊಳಗೆ ಹೊರಬೀಳಲಿದೆ.

ಇದನ್ನೂ ಓದಿ:ಗಣರಾಜ್ಯೋತ್ಸವ: ಹೂವಿನ ಬೀಜ ಸಹಿತ ರಾಷ್ಟ್ರಧ್ವಜ ವಿತರಿಸಿದ ಏರ್ ಇಂಡಿಯಾ

ಬಿಡ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಿದೇಶಿ ಸಂಸ್ಥೆಗಳು ಏರ್ ಇಂಡಿಯಾದ ಗರಿಷ್ಠ ಶೇ 49ರಷ್ಟು ಪಾಲುದಾರಿಕೆ ಪಡೆಯಲು ಅವಕಾಶವಿದೆ. ಸಂಸ್ಥೆಯ ಮಾಲೀಕತ್ವ ಮತ್ತು ನಿಯಂತ್ರಣ ಕುರಿತಾದ ನಿಯಮಗಳೂ ಅನ್ವಯವಾಗಲಿದ್ದು, ಭಾರತೀಯನೇ ಏರ್ ಇಂಡಿಯಾದ ಮಾಲೀಕತ್ವ ಹೊಂದಿರುತ್ತಾನೆ.

2018ರಲ್ಲಿ ಏರ್ ಇಂಡಿಯಾ ಶೇ 76ರಷ್ಟು ಪಾಲು ಮಾರಾಟ ಮಾಡಲು ಪ್ರಯತ್ನಿಸಿತ್ತು. ಆದರೆ, ಬಿಡ್ ಮಾಡಲು ಸಾಕಷ್ಟು ಅಡಚಣೆ ಎದುರಾಗಿತ್ತು. ಸಾಲದ ಮೊತ್ತ ₹ 50,000 ಕೋಟಿ ಬಾಕಿ ಇತ್ತು.

ದೇಶದ ಹಿಂದುಜಾ ಗ್ರೂಪ್ ಮತ್ತು ಇಂಟರ್‌ಅಪ್ಸ್ (ಅಮೆರಿಕನ್ ಸಂಸ್ಥೆ) ಬಿಡ್ ಸಲ್ಲಿಕೆಗೆಸಿದ್ಧತೆ ನಡೆಸಿರುವುದಾಗಿ ಇತ್ತೀಚೆಗೆ ಸುದ್ದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.