ನವದೆಹಲಿ: ‘ದೇಶದಲ್ಲಿ ಹಿಂಗಾರು ಅವಧಿಗೆ ರಸಗೊಬ್ಬರದ ಕೊರತೆ ಇಲ್ಲ. ಸಾಕಷ್ಟು ದಾಸ್ತಾನಿದೆ. ಈ ಅವಧಿಯಲ್ಲಿ ಅತಿಹೆಚ್ಚು ಆಹಾರ ಧಾನ್ಯಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ಯೂರಿಯಾ ಮತ್ತು ಡಿಎಪಿ ಸಾಕಷ್ಟು ಲಭ್ಯವಿದೆ. ಈ ಅವಧಿಗೆ ಅಗತ್ಯವಿರುವಷ್ಟು ಗೊಬ್ಬರ ಪೂರೈಕೆಗೆ ಕ್ರಮವಹಿಸಲಾಗಿದೆ’ ಎಂದು ತಿಳಿಸಿದರು.

ದೇಶದ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಮಣ್ಣಿನ ಹವಾಗುಣವೂ ಉತ್ತಮವಾಗಿದೆ. ಹಾಗಾಗಿ, ಉತ್ಪಾದನೆಯು ಏರಿಕೆಯಾಗುವ ನಿರೀಕ್ಷೆಯಿದೆ ಎಂದರು.

ಹಿಂಗಾರು ಅವಧಿಯಲ್ಲಿ 164.55 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಗೆ ಕೃಷಿ ಸಚಿವಾಲಯ ಗುರಿ ನಿಗದಿಪಡಿಸಿದೆ. ಈ ಪೈಕಿ 115 ಲಕ್ಷ ಟನ್ ಗೋಧಿ ಮತ್ತು 18.15 ಲಕ್ಷ ಟನ್ ಬೇಳೆಕಾಳುಗಳ ಉತ್ಪಾದನೆಗೆ ಗುರಿ ನಿಗದಿಯಾಗಿದೆ. ದೀಪಾವಳಿ ಹಬ್ಬದ ಬಳಿಕ ಹಿಂಗಾರು ಕೃಷಿ ಚಟುವಟಿಕೆ ಬಿರುಸುಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.