ನವದೆಹಲಿ: ಜಮೀನಿಗೆ ಸಂಬಂಧಿಸಿದ ಕಾನೂನು ತೊಡಕಿನಿಂದಾಗಿ ಕರ್ನಾಟಕದ ಮಂಗಳೂರಿನ ಗಂಜಿಮಠದ ಬಳಿ ನಿರ್ಮಾಣ ಮಾಡುತ್ತಿರುವ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿಯ ಪೂರ್ಣಕ್ಕೆ ವಿಳಂಬವಾಗಿದೆ ಎಂದು ಕೇಂದ್ರ ಸರ್ಕಾರವು, ಶುಕ್ರವಾರ ಲೋಕಸಭೆಗೆ ತಿಳಿಸಿದೆ.

‘ಪಾರ್ಕ್ ನಿರ್ಮಾಣದ ಒಟ್ಟು ವೆಚ್ಚ ₹62.78 ಕೋಟಿ ಆಗಿದೆ. 2022ರ ಜನವರಿಯಲ್ಲಿಯೇ ಈ ಅನುದಾನಕ್ಕೆ ಸರ್ಕಾರವು ಅನುಮೋದನೆ ನೀಡಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು, ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ಪ್ರಾಜೆಕ್ಟ್‌ಗೆ ಕೇಂದ್ರದ ಪಾಲು ₹31.38 ಕೋಟಿ ಆಗಿದೆ. ಅಂತಿಮ ಅನುಮೋದನೆ ನೀಡಿದ ಐದು ವರ್ಷಗಳಲ್ಲಿ ಈ ಯೋಜನೆಯ ಮುಕ್ತಾಯಗೊಳ್ಳಬೇಕಿದೆ.

‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನೀಡಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೆ ಶೇ 55ರಷ್ಟು ಕಾಮಗಾರಿ ಪೂರ್ಣಗೊಂಡಿದೆ’ ಎಂದು ಸಚಿವೆ ಅನುಪ್ರಿಯಾ ತಿಳಿಸಿದ್ದಾರೆ.

‘ಉದ್ದೇಶಿತ ಪಾರ್ಕ್ ವ್ಯಾಪ್ತಿಯಲ್ಲಿ 9.33 ಎಕರೆ ಜಮೀನಿಗೆ ಸಂಬಂಧಿಸಿದಂತೆ ಕಾನೂನು ತೊಡಕು ಎದುರಾಗಿದೆ. ಇನ್ನೂ ಈ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ, ಕೆಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಪ್ರಾಜೆಕ್ಟ್‌ನ ನಿರ್ಮಾಣ ವೆಚ್ಚದಲ್ಲಿ ಏರಿಕೆ ಮಾಡಿಲ್ಲ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.