ನವದೆಹಲಿ: ಸರಕು ಸಾಗಣೆ ವಹಿವಾಟು ನಡೆಸುವವರು ತಿಂಗಳ ರಿಟರ್ನ್ಸ್ನಲ್ಲಿಯೇ ಇ–ವೇ ಬಿಲ್ ಮಾಹಿತಿಯನ್ನೂ ಸೇರಿಸುವ ವ್ಯವಸ್ಥೆಯನ್ನು ಸರಕು ಮತ್ತು ಸೇವಾ ತೆರಿಗೆ ಜಾಲತಾಣ (ಜಿಎಸ್ಟಿಎನ್) ಅಭಿವೃದ್ಧಿಪಡಿಸಿದೆ.

ಸರಕುಗಳ ಪೂರೈಕೆಯ ಎರಡು ಪ್ರತ್ಯೇಕ ದಾಖಲೆ ಪತ್ರಗಳನ್ನು ನೀಡುವ ಮೂಲಕ ತೆರಿಗೆ ತಪ್ಪಿಸುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ.

‘ಜಿಎಸ್ಟಿಆರ್–1 ಅರ್ಜಿ ನಮೂನೆಯಲ್ಲಿ ಇ–ವೇ ಬಿಲ್ ಮಾಹಿತಿಯನ್ನು ತುಂಬಬೇಕು. ಇ–ವೇ ಬಿಲ್ ಪಡೆಯುವಾಗ ಸರಕು ಪೂರೈಸುವವರು, ಪಡೆಯುವವರು, ಸಂಖ್ಯೆ, ದಿನಾಂಕ, ಸರಕಿನ ಪ್ರಮಾಣ, ಇತ್ಯಾದಿ ಮಾಹಿತಿಗಳನ್ನು ಇ–ವೇ ಬಿಲ್ ಜಾಲತಾಣದಲ್ಲಿ ನೀಡಬೇಕು. ಈ ಮಾಹಿತಿಗಳು ಜಿಎಸ್ಟಿಎನ್ಗೆ ವರ್ಗಾವಣೆಯಾಗಲಿವೆ. ತೆರಿಗೆ ವಂಚನೆ ತಡೆಯುವುದರ ಜತೆಗೆ, ಎರಡು ಬಾರಿ ಮಾಹಿತಿ ತುಂಬುವುದು, ಮಾಹಿತಿ ಸಲ್ಲಿಸುವಾಗ ತಪ್ಪಾಗುವ ಪ್ರಮೇಯ ಎದುರಾಗುವುದಿಲ್ಲ’ ಎಂದು ಜಿಎಸ್ಟಿಎನ್ ಸಿಇಒ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.