ಮುಂಬೈ:  ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ವರದಿಯ ಬಳಿಕ ಉದ್ಯಮಿ ಗೌತಮ್ ಅದಾನಿ ಭಾರತದ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಇಳಿಕೆ ಕಂಡಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ಅವರ ಮೊದಲ ಸ್ಥಾನಕ್ಕೆ ಏರಿದ್ದಾರೆ.

ಅದಾನಿ ಅವರು ಕಳೆದ ವರ್ಷದಲ್ಲಿ ಒಂದು ವಾರಕ್ಕೆ ₹3 ಸಾವಿರ ಕೋಟಿಯಷ್ಟು ಸಂಪತ್ತು ನಷ್ಟ ಅನುಭವಿಸಿದ್ದಾರೆ. ಅವರ ಒಟ್ಟಾರೆ ಸಂಪತ್ತು ಮೌಲ್ಯವು ಶೇ 60ರಷ್ಟು ಇಳಿಕೆ ಆಗಿದೆ. ಎಂ3ಎಂ–ಹುರೂನ್ ಗ್ಲೋಬಲ್ ಇಂಡಿಯಾ ಪ್ರಕಟಿಸಿರುವ ಸಿರಿವಂತರ ಪಟ್ಟಿಯ ಪ್ರಕಾರ ಮಾರ್ಚ್ ಮಧ್ಯಭಾಗದ ವೇಳೆಗೆ ಅದಾನಿ ಅವರು ಒಟ್ಟು ಸಂಪತ್ತು ಮೌಲ್ಯ ₹4.34 ಲಕ್ಷ ಕೋಟಿಯಷ್ಟು ಇದೆ.

ಅಂಬಾನಿ ಅವರ ಸಂಪತ್ತು ಮೌಲ್ಯ ಶೇ 20ರಷ್ಟು ಕಡಿಮೆ ಆಗಿದೆ. ಹೀಗಿದ್ದರೂ ಅವರ ಒಟ್ಟು ಸಂಪತ್ತು ₹6.72 ಲಕ್ಷ ಕೋಟಿಯಷ್ಟು ಇರುವುದರಿಂದ ಅದಾನಿ ಅವರನ್ನು ಹಿಂದಿಕ್ಕಿ ಭಾರತದ ಸಿರಿವಂತರ ಪಟ್ಟಿಯಲ್ಲಿ ಮೊಲದ ಸ್ಥಾನಕ್ಕೆ ತಲುಪಿದ್ದಾರೆ.

ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹದ ಮೇಲೆ ಷೇರು ಬೆಲೆಯ ಮೇಲೆ ಕೃತಕವಾಗಿ ಪ್ರಭಾವ ಬೀರಿದ ಹಾಗೂ ಲೆಕ್ಕಪತ್ರಗಳ ಅಕ್ರಮದಲ್ಲಿ ತೊಡಗಿದ ಆರೋಪವನ್ನು ಹೊರಿಸಿದೆ. ಆದರೆ, ಸಮೂಹವು ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ. ಆದರೆ, ವರದಿಯಿಂದಾಗಿ ಅದಾನಿ ಸಮೂಹದ ಕಂಪನಿಗಳ ಷೇರು ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿತು.

ಅದಾನಿ ಮತ್ತು ಅಂಬಾನಿ ಸಂಪತ್ತು ಮೌಲ್ಯ ಕಡಿಮೆ ಆಗಿದ್ದರಿಂದ ಸಿರಿವಂತರ ಜಾಗತಿಕ ಪಟ್ಟಿಯಲ್ಲಿ ಇಬ್ಬರ ಸ್ಥಾನವೂ ಇಳಿಕೆ ಕಂಡಿದೆ. ಹೀಗಿದ್ದರೂ 10 ವರ್ಷಗಳ ಅವಧಿಗೆ ಇಬ್ಬರ ನಿವ್ವಳ ಸಂಪತ್ತಿನಲ್ಲಿ ಏರಿಕೆ ಆಗುತ್ತಿದೆ. ಅದಾನಿ ನಿವ್ವಳ ಸಂಪತ್ತು ಮೌಲ್ಯ ಶೇ 1,225 ಮತ್ತು ಅಂಬಾನಿ ಸಂಪತ್ತು ಮೌಲ್ಯ ಶೇ 356ರಷ್ಟು ಹೆಚ್ಚಾಗಿದೆ.

ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಭಾರತದಲ್ಲಿ 10 ಮಹಿಳೆಯರು ಇದ್ದು, ಸ್ವ–ಪರಿಶ್ರಮದಿಂದ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವವರ ಸಾಲಿನಲ್ಲಿ ಸಾಫ್ಟ್‌ವೇರ್ ಮತ್ತು ಸೇವೆಗಳ ವಲಯದಲ್ಲಿ ರಾಧಾ ವೆಂಬು ಅವರು ಎರಡನೇ ಸ್ಥಾನದಲ್ಲಿ ಇದ್ದಾರೆ. ಅವರ ಸಂಪತ್ತು ಮೌಲ್ಯ ₹32,800 ಕೋಟಿ ಇದೆ ಎಂದು ಹುರೂನ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.