ಮುಂಬೈ: ದಕ್ಷಿಣ ಕೊರಿಯಾದ ಹ್ಯುಂಡೇ ಮೋಟಾರ್ ಇಂಡಿಯಾ ಕಂಪನಿಯು ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ₹32 ಸಾವಿರ ಕೋಟಿ ಹೂಡಿಕೆ ಮಾಡಲಿದ್ದು, ಇದಕ್ಕೆ ಪೂರಕವಾಗಿ ಅ. 15ರಿಂದ ಸಾರ್ವಜನಿಕ ಕೊಡುಗೆ (ಐಪಿಒ) ಆರಂಭವಾಗಲಿದೆ ಕಂಪನಿ ಹೇಳಿದೆ.

ಕಂಪನಿಯ ಐಪಿಒ ಸಂಬಂಧಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಕಂಪನಿಯ ಅಧಿಕಾರಿ ಉನ್ಸೂ ಕಿಮ್, ‘ಪುಣೆಯಲ್ಲಿರುವ ತನ್ನ ಘಟಕದ ಅಭಿವೃದ್ಧಿಗೆ ₹6 ಸಾವಿರ ಕೋಟಿ ಖರ್ಚು ಮಾಡಲಿದೆ’ ಎಂದಿದ್ದಾರೆ.

‘ಈ ಘಟಕವು ಸದ್ಯ 8.24 ಲಕ್ಷ ಕಾರುಗಳ ತಯಾರಿಕಾ ಸಾಮರ್ಥ್ಯ ಹೊಂದಿದೆ. 2028ರ ಹೊತ್ತಿಗೆ ಇದನ್ನು 11 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದು ನಮ್ಮ ಕಂಪನಿ ದೇಶೀಯ ಹಾಗೂ ರಫ್ತು ಕಾರ್ಯಾಚರಣೆಗೆ ನೆರವಾಗಲಿದೆ’ ಎಂದಿದ್ದಾರೆ.

‘ಐಪಿಒ ಮೂಲಕ ಸ್ಥಳೀಯ ಹಾಗೂ ಜಾಗತಿಕ ಹೂಡಿಕೆದಾರರಿಗೆ ಅವಕಾಶ ನೀಡಲಾಗಿದೆ. ಅ. 15ಕ್ಕೆ ಆರಂಭವಾಗಲಿರುವ ಐಪಿಒ ಮೂಲಕ ಕಂಪನಿಯ ಷೇರುಗಳ ಖರೀದಿಗೆ ಅ. 17ರವರೆಗೂ ಅವಕಾಶ ನೀಡಲಾಗಿದೆ’ ಎಂದು ಕಿಮ್ ತಿಳಿಸಿದರು.

‘ಹ್ಯುಂಡೇನಲ್ಲಿ ಹೂಡಿಕೆ ಮಾಡುವ ಆಸಕ್ತಿ ಹೊಂದಿರುವ ದೊಡ್ಡ ಕಂಪನಿಗಳಿಗೆ ಅ. 14ರಿಂದ ಅವಕಾಶ ಕಲ್ಪಿಸಲಾಗಿದೆ. ಕಂಪನಿಯ ಐಪಿಒ ಆರಂಭಿಕ ಬೆಲೆಯನ್ನು ₹1,865ರಿಂದ ₹1,960ಕ್ಕೆ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು.

‘ಬ್ಯಾಟರಿ ಚಾಲಿತ ವಾಹನಗಳ ತಯಾರಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಭಾರತದಲ್ಲಿ ಸದ್ಯ ಎಸ್ಯುವಿ ವಿಭಾಗದಲ್ಲಿ ವಿಫುಲ ಅವಕಾಶಗಳಿವೆ. ಜಾಗತಿಕ ಮಾರುಕಟ್ಟೆಯನ್ನೂ ಗಮನದಲ್ಲಿಟ್ಟುಕೊಂಡು, ಕಂಪನಿಯು ತನ್ನ ಅನುಭವದ ಆಧಾರದಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತಿದೆ. ಆ ಮೂಲಕ ಹೊಸ ಮಾದರಿಯ ಕಾರುಗಳನ್ನು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೊರತರಲಿದೆ’ ಎಂದಿದ್ದಾರೆ.

‘ಭಾರತದ ಗ್ರಾಮೀಣ ಭಾಗದಲ್ಲೂ ಹ್ಯುಂಡೇ ಕಾರುಗಳಿಗೆ ಉತ್ತಮ ಬೇಡಿಕೆ ಇದೆ. ಕಳೆದ ಜನವರಿಯಿಂದ ಸೆಪ್ಟೆಂಬರ್ವರೆಗೆ ಗ್ರಾಮೀಣ ಭಾಗದಲ್ಲೂ ಎಸ್ಯುವಿ ಕಾರುಗಳಿಗೆ ಭಾರಿ ಬೇಡಿಕೆ ಬಂದಿದೆ. ಪಟ್ಟಣ ಪ್ರದೇಶದಂತೆಯೇ ಗ್ರಾಮೀಣ ಭಾಗದಿಂದಲೂ ಕಂಪನಿಯ ಎಸ್ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.