ನವದೆಹಲಿ: ಅಮೆರಿಕದ ಸುಂಕ ಏರಿಕೆ ನೀತಿಗೆ ಭಾರತವೂ ಪ್ರತ್ಯುತ್ತರ ನೀಡಿದೆ.ಬೇಳೆಕಾಳು, ಕಬ್ಬಿಣ, ಉಕ್ಕು ಉತ್ಪನ್ನಗಳನ್ನೂ ಒಳಗೊಂಡುಆಮದಾಗುವ ಒಟ್ಟು 29 ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ.ಆಗಸ್ಟ್ 4 ರಿಂದ ಹೊಸ ಸುಂಕ ಅನ್ವಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಭಾರತ ಸರ್ಕಾರ ಕಳೆದ ವಾರವಷ್ಟೇ30 ಸರಕುಗಳ ಮೇಲೆಶೇ 50 ರಷ್ಟು ಸುಂಕ ಹೆಚ್ಚಿಸುವ ಪ್ರಸ್ತಾವನೆಯನ್ನು ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ಸಲ್ಲಿಸಿತ್ತು.

800 ಸಿಸಿ ಸಾಮರ್ಥ್ಯದ ಮೋಟರ್ ಸೈಕಲ್‌ಗಳಿಗೆ ಆಮದು ಸುಂಕ ಹೆಚ್ಚಿಸುವ ಬಗ್ಗೆ ಸರ್ಕಾರದ ಅಧಿಸೂಚನೆಯಲ್ಲಿ ನಮೂದಿಸಿಲ್ಲ. ಆದರೆ ‘ಡಬ್ಲ್ಯುಟಿಒ’ಗೆ ಕಳುಹಿಸಿದ್ದ ಪ್ರಸ್ತಾವನೆಯಲ್ಲಿ ಹಾರ್ಲೆ ಡೇವಿಡ್ಸನ್ ಮತ್ತು ಟ್ರಾಯಂಪ್ ಒಳಗೊಂಡು ಕೆಲವು ಮೋಟರ್ ಸೈಕಲ್‌ಗಳ ಮೇಲಿನ ಸುಂಕವನ್ನು ಶೇ 50 ರಷ್ಟು ಹೆಚ್ಚಿಸುವುದಾಗಿ ತಿಳಿಸಿತ್ತು.

ಉಕ್ಕು ಮತ್ತು ಅಲ್ಯುಮಿನಿಯಂನ ಕೆಲ ಉತ್ಪನ್ನಗಳ ಆಮದಿನ ಮೇಲೆ ಅಮೆರಿಕವು ಸುಂಕ ಹೆಚ್ಚಿಸಿದ್ದರಿಂದ ಭಾರತದ ರಫ್ತು ವಹಿವಾಟಿನಮೇಲೆ ₹1,614 ಕೋಟಿ ನಷ್ಟ ಉಂಟಾಗಲಿದೆ.

ಇದೀಗ ಭಾರತವು 30 ಸರಕುಗಳ ಮೇಲಿನ ಆಮದು ಸುಂಕ ಹೆಚ್ಚಿಸಿರುವುದರಿಂದ ಅಮೆರಿಕದ ರಫ್ತು ವಹಿವಾಟಿಗೂ ಇಷ್ಟೇ ಮೊತ್ತದ ನಷ್ಟ ಎದುರಾಗಲಿದೆ.

ದೇಶಿ ಸರಕು ಅಗ್ಗವಾಗಲಿದೆ: ‘ಅಮೆರಿಕದಿಂದ ಆಮದಾಗುವ ಸರಕುಗಳ ಸುಂಕ ಹೆಚ್ಚಳ ನಿರ್ಧಾರ ನಿರೀಕ್ಷಿತವಾಗಿತ್ತು. ಆದರೆ, ಸುಂಕ ಹೆಚ್ಚಳದ ಪ್ರಮಾಣ ಅನಿರೀಕ್ಷಿತವಾಗಿದೆ. ಇದರಿಂದ ಆಮದಾಗುವ ಸರಕುಗಳಿಗಿಂತಲೂ ದೇಶಿ ಸರಕುಗಳ ಬೆಲೆ ಅಗ್ಗವಾಗುವ ಸಾಧ್ಯತೆ ಇದೆ. ಕ್ರಮೇಣ ದೇಶಿ ತಯಾರಿಕೆಯಲ್ಲಿ ಹೆಚ್ಚಳವಾಗಲಿದೆ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಎಂ.ಎಸ್. ಮಣಿ ಅಭಿಪ್ರಾಯಪಟ್ಟಿದ್ದಾರೆ.

‘ದೇಶಿ ಸರಕುಗಳು ಅಗ್ಗವಾಗಲಿವೆ’
‘ಅಮೆರಿಕದಿಂದ ಆಮದಾಗುವ ಸರಕುಗಳ ಸುಂಕ ಹೆಚ್ಚಳ ನಿರ್ಧಾರ ನಿರೀಕ್ಷಿತವಾಗಿತ್ತು. ಆದರೆ, ಸುಂಕ ಹೆಚ್ಚಳದ ಪ್ರಮಾಣ ಅನಿರೀಕ್ಷಿತವಾಗಿದೆ. ಇದರಿಂದ ಆಮದಾಗುವ ಸರಕುಗಳಿಗಿಂತಳೂ ದೇಶಿ ಸರಕುಗಳ ಬೆಲೆ ಅಗ್ಗವಾಗುವ ಸಾಧ್ಯತೆ ಇದೆ. ಕ್ರಮೇಣ ದೇಶಿ ತಯಾರಿಕೆಯಲ್ಲಿ ಹೆಚ್ಚಳವಾಗಲಿದೆ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಎಂ.ಎಸ್. ಮಣಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.