ನವದೆಹಲಿ: ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕದಲ್ಲಿ ಭಾರತವು 63ನೇ ಸ್ಥಾನ ಪಡೆದಿದೆ.

ಯುರೋಪ್ ದೇಶಗಳು ಈ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿವೆ. ಸ್ವೀಡನ್ ಅಗ್ರಸ್ಥಾನ ಪಡೆದಿದ್ದು ಡೆನ್ಮಾರ್ಕ್, ಫಿನ್ಲೆಂಡ್, ಸ್ವಿಡ್ಜರ್ಲೆಂಡ್ ಹಾಗೂ ಫ್ರಾನ್ಸ್ ಆ ನಂತರದ ಸ್ಥಾನದಲ್ಲಿವೆ. ಚೀನಾ 20ನೇ ಸ್ಥಾನದಲ್ಲಿದೆ.

ವಿಶ್ವ ಆರ್ಥಿಕ ವೇದಿಕೆ ಸಿದ್ಧಪಡಿಸಿರುವ ಈ ಸೂಚ್ಯಂಕದ ವರದಿ ಬುಧವಾರ ಬಿಡುಗಡೆಯಾಗಿದೆ. ಎನರ್ಜಿ ನೀತಿ, ಭದ್ರತೆ ಹಾಗೂ ಸುಸ್ಥಿರತೆಯಲ್ಲಿ ಭಾರತವು ಗಣನೀಯ ಸುಧಾರಣೆ ಕಂಡಿದೆ ಎಂದು ಹೇಳಿದೆ.

ನೀತಿ, ಭದ್ರತೆ ಹಾಗೂ ಸುಸ್ಥಿರತೆ ವ್ಯವಸ್ಥೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಸುಧಾರಣೆ ಕಂಡಿವೆ. ಚೀನಾ ಹಾಗೂ ಬ್ರೆಜಿಲ್ನಲ್ಲೂ ಸುಧಾರಣೆ ಹೆಚ್ಚಿದೆ. ಆದರೆ, ಶೇ 83ರಷ್ಟು ರಾಷ್ಟ್ರಗಳು ಈ ಮೂರು ವ್ಯವಸ್ಥೆಯ ಪೈಕಿ ಒಂದರಲ್ಲಿ ನಿರೀಕ್ಷಿತ ಸುಧಾರಣೆ ಕಾಣುವಲ್ಲಿ ಹಿಂದುಳಿದಿವೆ ಎಂದು ಹೇಳಿದೆ.

ಭಾರತದಲ್ಲಿ ಶಕ್ತಿ ಪರಿವರ್ತನೆಗೆ ಸಂಬಂಧಿಸಿದಂತೆ ಸರ್ಕಾರವು ಜಾಗೃತಿ ಮೂಡಿಸುತ್ತಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಮಾರ್ಗಸೂಚಿಗಳನ್ನು ರೂಪಿಸುತ್ತಿದೆ. ವ್ಯವಸ್ಥೆಯ ಮರುಹೊಂದಾಣಿಕೆಗೆ ಪೂರಕವಾದ ವಾತಾವರಣದ ಸೃಷ್ಟಿಗೆ ಒತ್ತು ನೀಡಿದೆ ಎಂದು ವರದಿ ತಿಳಿಸಿದೆ.

120 ರಾಷ್ಟ್ರಗಳ ಪೈಕಿ 107 ದೇಶಗಳು ಕಳೆದ ಒಂದು ದಶಕದ ಅವಧಿಯಲ್ಲಿ ಶಕ್ತಿ ಪರಿವರ್ತನೆಯಲ್ಲಿ ಪ್ರಗತಿ ಪ್ರದರ್ಶಿಸಿವೆ. ಆದರೆ, ಒಟ್ಟಾರೆ ಪ್ರದರ್ಶನವು ಮಂದಗತಿಯಲ್ಲಿದೆ. ಸಮತೋಲನ ಕಾಯ್ದುಕೊಳ್ಳುವುದು ಅವುಗಳಿಗೆ ಸವಾಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.