ನವದೆಹಲಿ: ನಿಯಮ ಉಲ್ಲಂಘನೆಯ ಆರೋಪದ ಅಡಿಯಲ್ಲಿ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ವೇದಿಕೆಗಳ ಪ್ರಮುಖ ಮಾರಾಟಗಾರರ ಮೇಲೆ ದಾಳಿ ನಡೆಸಿರುವ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆಜಾನ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ಕ್ಲೌಡ್ಟೇಲ್ ಮತ್ತು ಅಪಾರಿಯೊ, ಫ್ಲಿಪ್ಕಾರ್ಟ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ಹಲವು ಮಾರಾಟಗಾರರ ಮೇಲೆ ಸಿಸಿಐ ಅಧಿಕಾರಿಗಳು ಗುರುವಾರ ಮತ್ತು ಶುಕ್ರವಾರ ದಾಳಿ ನಡೆಸಿದ್ದಾರೆ. ಸ್ಪರ್ಧಾ ಕಾನೂನುಗಳನ್ನು ಈ ಮಾರಾಟಗಾರರು ಮತ್ತು ವೇದಿಕೆಗಳು ಉಲ್ಲಂಘಿಸಿವೆ ಎಂಬ ಆರೋಪ ಇದೆ.

ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ತಮ್ಮ ಆದ್ಯತೆಯ ಮಾರಾಟಗಾರರಿಗೆ ಹೆಚ್ಚಿನ ಒತ್ತು ನೀಡುತ್ತಿವೆ ಎಂಬ ಆರೋಪದ ಅಡಿ ಸಿಸಿಐ 2020ರ ಜನವರಿಯಲ್ಲಿ ತನಿಖೆಗೆ ಆದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ ಎನ್ನಲಾಗಿದೆ. ಈ ಕುರಿತು ಸಿಸಿಐ, ಅಮೆಜಾನ್, ಫ್ಲಿಪ್ಕಾರ್ಟ್, ಕ್ಲೌಡ್ಟೇಲ್ ಮತ್ತು ಅಪಾರಿಯೊ ಕಡೆಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.