ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ಭಾರತವು ಹೆಚ್ಚಿನ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಆಕರ್ಷಿಸುವುದನ್ನು ಮುಂದುವರಿಸಲಿದೆ ಎಂಬ ವಿಶ್ವಾಸವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ವ್ಯಕ್ತಪಡಿಸಿದ್ದಾರೆ.

2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಜಾಗತಿಕವಾಗಿ ಎಫ್‌ಡಿಐ ಕುಸಿತ ಕಂಡಿದ್ದರೂ ಭಾರತದಲ್ಲಿ ಗರಿಷ್ಠ ಪ್ರಮಾಣದ ಹೂಡಿಕೆ ಆಗಿತ್ತು ಎಂದು ಅವರು ಹೇಳಿದ್ದಾರೆ.

2020–21ರಲ್ಲಿ ಭಾರತಕ್ಕೆ ಎಫ್‌ಡಿಐ ಒಳಹರಿವು ಶೇ 19ರಷ್ಟು ಏರಿಕೆ ಕಂಡು ₹ 4.41 ಲಕ್ಷ ಕೋಟಿಗಳಷ್ಟಾಗಿದೆ. ಈಕ್ವಿಟಿ, ಮರು ಹೂಡಿಕೆ ಮೇಲಿನ ಗಳಿಕೆ ಮತ್ತು ಬಂಡವಾಳವನ್ನೂ ಒಳಗೊಂಡು ಒಟ್ಟಾರೆ ಎಫ್‌ಡಿಐ ಹೂಡಿಕೆಯು ಶೇ 10ರಷ್ಟು ಹೆಚ್ಚಾಗಿ ₹ 6.04 ಲಕ್ಷ ಕೋಟಿಗಳಿಗೆ ತಲುಪಿದೆ. 2019–20ನೇ ಹಣಕಾಸು ವರ್ಷದಲ್ಲಿ ₹ 5.50 ಲಕ್ಷ ಕೋಟಿಗಳಷ್ಟಿತ್ತು.

ಸಿಐಐ–ಹೊರಾಸಿಸ್ ಇಂಡಿಯಾ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ದೇಶದ ರಫ್ತು ವಹಿವಾಟು ಸಹ ಉತ್ತಮ ಬೆಳವಣಿಗೆ ಕಾಣುತ್ತಿದ್ದು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ₹ 29.60 ಲಕ್ಷ ಕೋಟಿಗಳಿಗೆ ತಲುಪಲಿದೆ ಎಂದು ಅವರು ಹೇಳಿದ್ದಾರೆ.

ಜುಲೈ 1 ರಿಂದ 21ರವರೆಗಿನ ಅವಧಿಯಲ್ಲಿ ರಫ್ತು ವಹಿವಾಟು ಮೌಲ್ಯವು ₹ 1.62 ಲಕ್ಷ ಕೋಟಿಗಳಷ್ಟಾಗಿದ್ದು, ಜುಲೈ ತಿಂಗಳ ಅಂತ್ಯದ ವೇಳೆಗೆ ₹ 2.44 ಲಕ್ಷ ಕೋಟಿಳಷ್ಟಾಗುವ ಅಂದಾಜು ಮಾಡಲಾಗಿದೆ. ₹ 29.60 ಲಕ್ಷ ಕೋಟಿಗಳ ಗುರಿ ತಲುಪುವ ಹಾದಿಯಲ್ಲಿದ್ದೇವೆ ಎನ್ನುವುದನ್ನು ಇದು ತೋರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.