ನವದೆಹಲಿ: 'ಕೋವಿಡ್ ಸಾಂಕ್ರಾಮಿಕದಿಂದಾಗಿ ಎದುರಾಗಿದ್ದ ಆರ್ಥಿಕ ಅಪಾಯಗಳು ಕಡಿಮೆ ಆಗಿರುವ ಕಾರಣ, ಭಾರತದ ಬ್ಯಾಂಕ್ಗಳ ಕಾರ್ಯಾಚರಣೆ ಸ್ಥಿತಿಯು ಉತ್ತಮಗೊಂಡಿದೆ’ ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ಹೇಳಿದೆ.

ಕೋವಿಡ್ಗೂ ಮೊದಲಿನ ಸ್ಥಿತಿಗೆ ಹೋಲಿಸಿದರೆ, ಬ್ಯಾಂಕಿಂಗ್ ವಲಯದ ಆರೋಗ್ಯವನ್ನು ಹೇಳುವ ಹಲವು ಸೂಚ್ಯಂಕಗಳು ಸುಧಾರಣೆ ಕಂಡಿವೆ ಎಂದು ಅದು ಹೇಳಿದೆ. ‘ದೇಶದ ಅರ್ಥ ವ್ಯವಸ್ಥೆಯ ಗಾತ್ರವು ಬೃಹತ್ ಆಗಿರುವುದು ಹಾಗೂ ಇಲ್ಲಿನ ಜನಸಂಖ್ಯೆಯು ಬ್ಯಾಂಕ್ಗಳ ಪಾಲಿಗೆ ಲಾಭದಾಯಕ ವಹಿವಾಟನ್ನು ನಡೆಸಲು, ವರಮಾನ ಮೂಲವನ್ನು ವಿಸ್ತರಿಸಿಕೊಳ್ಳಲು ಅವಕಾಶಗಳನ್ನು ಒದಗಿಸುವಂತಿವೆ’ ಎಂದು ಫಿಚ್ ಹೇಳಿದೆ.

ಕೋವಿಡ್ ಸಾಂಕ್ರಾಮಿಕವು ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಿತು. ಆದರೆ ಈಗ ಅದಕ್ಕೆ ಸಂಬಂಧಿಸಿದ ಅಪಾಯಗಳು ತಗ್ಗಿವೆ ಎಂದು ಫಿಚ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.