ನವದೆಹಲಿ: ಆರ್ಥಿಕತೆಯಲ್ಲಿ ಚೇತರಿಕೆ ಹಾಗೂ ಕೋವಿಡ್ ಸಂಬಂಧಿತ ನಿರ್ಬಂಧಗಳನ್ನು ಹಿಂದಕ್ಕೆ ಪಡೆಯುತ್ತಿರುವುದರಿಂದ ದೇಶದ ಇಂಧನ ಬೇಡಿಕೆಯು ಮಾರ್ಚ್ನಲ್ಲಿ ಕೋವಿಡ್ಗೂ ಮುಂಚಿನ ಮಟ್ಟವನ್ನು ತಲುಪಿದೆ.

ಐದು ರಾಜ್ಯಗಳ ಚುನಾವಣೆಯ ಕಾರಣದಿಂದಾಗಿ ಇಂಧನ ದರ ಏರಿಕೆಯನ್ನು ದೀರ್ಘ ಅವಧಿಯವರೆಗೆ ತಡೆಹಿಡಿಯಲಾಗಿತ್ತು. ಹೀಗಾಗಿ ಚುನಾವಣೆ ಮುಗಿಯುತ್ತಿದ್ದಂತೆಯೇ ಬೆಲೆ ಏರಿಕೆ ಆಗಬಹುದು ಎನ್ನುವ ನಿರೀಕ್ಷೆಯಿಂದ ಮಾರ್ಚ್ನ ಮೊದಲೆರಡು ವಾರಗಳಲ್ಲಿ ವಿತರಕರು ಮತ್ತು ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಸಂಗ್ರಹಿಸಿ ಇಡಲು ಮುಂದಾದರು. ಈ ವೇಳೆ ಪೆಟ್ರೋಲ್ ಮಾರಾಟ ಶೇ 18ರಷ್ಟು ಮತ್ತು ಡೀಸೆಲ್ ಮಾರಾಟ ಶೇ 23.7ರಷ್ಟು ಹೆಚ್ಚಾಯಿತ್ತು. ಮಾರ್ಚ್ 22ರಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಆರಂಭ ಆದ ಬಳಿಕ ಖರೀದಿ ಪ್ರಮಾಣ ಕಡಿಮೆ ಆಗಲಾರಂಭಿಸಿತು.

ದೇಶದ ಮಾರುಕಟ್ಟೆಯಲ್ಲಿ ಶೇ 90ರಷ್ಟು ಮಾರಾಟದ ಪಾಲು ಹೊಂದಿರುವ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಾರ್ಚ್ನಲ್ಲಿ 26.9 ಲಕ್ಷ ಟನ್ಗಳಷ್ಟು ಪೆಟ್ರೋಲ್ ಮಾರಾಟ ಮಾಡಿವೆ. ಕಳೆದ ವರ್ಷದ ಮಾರ್ಚ್ಗೆ ಹೋಲಿಸಿದರೆ ಶೇ 8.7ರಷ್ಟು ಏರಿಕೆ ಆಗಿದೆ. 2019ರ ಮಾರ್ಚ್ಗೆ ಹೋಲಿಸಿದರೆ ಶೇ 145.2ರಷ್ಟು ಹೆಚ್ಚಾಗಿದೆ.

ಡೀಸೆಲ್ ಮಾರಾಟವು ಶೇ 10.1ರಷ್ಟು ಹೆಚ್ಚಾಗಿ 70.5 ಲಕ್ಷ ಟನ್ಗಳಿಗೆ ತಲುಪಿದೆ. 2019ರ ಮಾರ್ಚ್ಗೆ ಹೋಲಿಸಿದರೆ ಮಾರಾಟದಲ್ಲಿ ಶೇ 5ರಷ್ಟು ಏರಿಕೆ ಆಗಿದೆ.

ಫೆಬ್ರುವರಿಗೆ ಹೋಲಿಸಿದರೆ ಮಾರ್ಚ್ನಲ್ಲಿ ಪೆಟ್ರೋಲ್ ಮಾರಾಟ ಶೇ 17.3ರಷ್ಟು, ಡೀಸೆಲ್ ಮಾರಾಟ ಶೇ 22.3ರಷ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.