ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ ಮೇ ತಿಂಗಳಿನಲ್ಲಿ ಆಗಿರುವ ಹೂಡಿಕೆಯು ಏಪ್ರಿಲ್‌ಗೆ ಹೋಲಿಸಿದರೆ ಶೇ 57ರಷ್ಟು ಇಳಿಕೆ ಆಗಿದೆ. ಏಪ್ರಿಲ್‌ನಲ್ಲಿ ₹ 680 ಕೋಟಿಗಳಷ್ಟು ಹೂಡಿಕೆ ಆಗಿತ್ತು. ಮೇ ತಿಂಗಳಿನಲ್ಲಿ ₹ 288 ಕೋಟಿಗಳಿಗೆ ಇಳಿಕೆ ಕಂಡಿದೆ.

ಮೇನಲ್ಲಿ ಹೂಡಿಕೆ ತಗ್ಗಿದ್ದರೂ ಚಿನ್ನದ ಇಟಿಎಫ್‌ನ ನಿರ್ವಹಣಾ ಸಂಪತ್ತು ಮೌಲ್ಯವು ₹ 16,625 ಕೋಟಿಗಳಿಗೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳ ಅಂತ್ಯಕ್ಕೆ ನಿರ್ವಹಣಾ ಸಂಪತ್ತು ಮೌಲ್ಯವು ₹ 15,629 ಕೋಟಿಗಳಷ್ಟಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

‘ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆಯುತ್ತಿರುವುದರಿಂದ ಹೂಡಿಕೆದಾರರು ತಮ್ಮ ಹಣವನ್ನು ಚಿನ್ನದ ಇಟಿಎಫ್‌ಗೆ ಬದಲಾಗಿ ಷೇರುಗಳಲ್ಲಿ ತೊಡಗಿಸಿದ್ದಾರೆ. ಇದರಿಂದಾಗಿ ಹೂಡಿಕೆಯಲ್ಲಿ ಇಳಿಕೆ ಆಗಿದೆ’ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

‘ಈಚೆಗೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಹೂಡಿಕೆದಾರರು ಲಾಭಗಳಿಕೆಗೆ ಗಮನ ನೀಡಿದ್ದಾರೆ. ಇದೂ ಸಹ ಹೂಡಿಕೆ ಕಡಿಮೆ ಆಗಲು ಕಾರಣವಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಕಳೆದ ಕೆಲವು ವರ್ಷಗಳಿಂದ ಅತ್ಯಂತ ಸವಾಲಿನ ಪರಿಸ್ಥಿತಿ ಇದ್ದರೂ ಚಿನ್ನವು ಉತ್ತಮ ಗಳಿಕೆ ತಂದುಕೊಡುವ ಆಸ್ತಿ ವರ್ಗವಾಗಿಯೇ ಮುಂದುವರಿದಿದ್ದು, ಹೂಡಿಕೆದಾರರನ್ನು ಆಕರ್ಷಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

2020ರ ಜನವರಿಯಿಂದ 2021ರ ಮೇ ತಿಂಗಳವರೆಗೆ ಚಿನ್ನದ ಇಟಿಎಫ್‌ಗಳಲ್ಲಿ ಒಟ್ಟಾರೆ ₹ 9,377 ಕೋಟಿ ಬಂಡವಾಳ ಹೂಡಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.