ನವದೆಹಲಿ: ನೌಕರರು ತಮ್ಮ ಮ್ಯಾನೇಜರ್ಗಳ ಅನುಮತಿ ಪಡೆದು ಕಂಪನಿಯ ಕೆಲಸದ ಜೊತೆಯಲ್ಲೇ ಸಣ್ಣ–ಪುಟ್ಟ ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಇನ್ಫೊಸಿಸ್ ಹೇಳಿದೆ. ಆದರೆ ಈ ರೀತಿಯ ಕೆಲಸಗಳು ಕಂಪನಿಯ ಕೆಲಸದ ಜೊತೆ ಸ್ಪರ್ಧೆಗೆ ಇಳಿಯುವಂತಿರಬಾರದು, ಹಿತಾಸಕ್ತಿಯ ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು ಎಂದು ಸ್ಪಷ್ಟಪಡಿಸಿದೆ.

ನೌಕರರು ಕೆಲಸ ತೊರೆಯುವುದನ್ನು ಕಡಿಮೆ ಮಾಡಲು ಈ ನಡೆಯು ಕಂಪನಿಗೆ ಒಂದಿಷ್ಟು ನೆರವಾಗಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಈ ವಿಚಾರವಾಗಿ ಇನ್ಫೊಸಿಸ್ ತನ್ನ ನೌಕರರಿಗೆ ರವಾನಿಸಿರುವ ಇಮೇಲ್ನಲ್ಲಿ ‘ಮೂನ್ಲೈಟಿಂಗ್’ ಪದ ಉಲ್ಲೇಖವಾಗಿಲ್ಲ. ಒಂದೇ ಬಾರಿಗೆ ಎರಡು ಕಡೆಗಳಲ್ಲಿ ನೌಕರಿ ಹೊಂದುವುದನ್ನು ಮೂನ್ಲೈಟಿಂಗ್ ಎಂದು ವ್ಯಾಖ್ಯಾನಿಸಲಾಗಿದೆ.

ಮೂನ್ಲೈಟಿಂಗ್ಗೆ ಅವಕಾಶ ಇಲ್ಲ ಎಂದು ಇನ್ಫೊಸಿಸ್ ಈಚೆಗೆ ಸ್ಪಷ್ಟಪಡಿಸಿತ್ತು. ಮೂನ್ಲೈಟಿಂಗ್ನಲ್ಲಿ ತೊಡಗಿದ್ದ ಕಾರಣ 300 ಜನರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ವಿಪ್ರೊ ಈಚೆಗೆ ತಿಳಿಸಿದೆ.

ಕಂಪನಿಯ ಒಳಗೆ ಕೂಡ ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಇನ್ಫೊಸಿಸ್ ಹೇಳಿದೆ. ಮೂನ್ಲೈಟಿಂಗ್ ಪ್ರಕರಣಗಳನ್ನು ಅನುಕಂಪದಿಂದ ನಿರ್ವಹಿಸುವುದಾಗಿ ದೇಶದ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.