ನವದೆಹಲಿ: ಟೈಮ್ ಮ್ಯಾಗಜಿನ್ ಜಗತ್ತಿನ 100 ಅತ್ಯುತ್ತಮ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯ ಪ್ರಕಾರ ಭಾರತದ ಒಂದೇ ಒಂದು ಕಂಪನಿ ಆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕರ್ನಾಟಕ ಮೂಲದ ಇನ್ಫೊಸಿಸ್ ಕಂಪನಿ ಟೈಮ್ ಮ್ಯಾಗಜಿನ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಂಸ್ಥೆಯಾಗಿದ್ದು 64 ನೇ ಸ್ಥಾನ ಪಡೆದಿದೆ. ಈ ಕುರಿತು ಸಂಭ್ರಮ ವ್ಯಕ್ತಪಡಿಸಿ ಇನ್ಫೊಸಿಸ್ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಈ ಪಟ್ಟಿಯು TIME and Statista ಸಂಸ್ಥೆಗಳಿಂದ ತಯಾರಿಸಲ್ಪಟ್ಟಿದ್ದು, ವರ್ಷದಿಂದ ವರ್ಷಕ್ಕೆ ಕಂಪನಿ ಬೆಳವಣಿಗೆ, ಉದ್ಯೋಗಿಗಳ ಸಂತೃಪ್ತಿ, ಕೆಲಸ ಮಾಡುವ ವಾತಾವರಣ, ಸಾಮಾಜಿಕ ಮತ್ತು ಕಾರ್ಪೊರೇಟ್ ಹೊಣೆಗಾರಿಕೆಗಳು ಎಂಬ ಮಾನದಂಡಗಳ ಮೇಲೆ ಈ ಪಟ್ಟಿ ತಯಾರಿಸಲಾಗಿದೆ.

ಪಟ್ಟಿಯ ಪ್ರಕಾರ ಮೈಕ್ರೊಸಾಫ್ಟ್ ಮೊದಲ ಸ್ಥಾನ ಪಡೆದರೆ, ಆ್ಯಪಲ್, ಗೂಗಲ್ ಹಾಗೂ ಮೆಟಾ ನಂತರದ ಸ್ಥಾನಗಳನ್ನು ಪಡೆದಿವೆ. ಉಳಿದಂತೆ ಆಕ್ಸೆಂಚರ್, ಪೈಜರ್ (Pfizer), ಅಮೆರಿಕನ್ ಎಕ್ಸ್ಪ್ರೆಸ್, ಡೆಲ್, ಡೆಲ್ಟಾ ಏರ್ಲೈನ್ಸ್, ಸ್ಟಾರ್ಬಕ್ಸ್, ಫೊಕ್ಸ್ವ್ಯಾಗನ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಅಗ್ರ ಹತ್ತು ಪಟ್ಟಿಯಲ್ಲಿ ಟೆಕ್ ಕಂಪನಿಗಳೇ ಹೆಚ್ಚು ಸ್ಥಾನ ಪಡೆದಿರುವುದು ಗಮನಾರ್ಹ. 'ಟೈಮ್' ಮ್ಯಾಗಜಿನ್ ಅಮೆರಿಕದ ನ್ಯೂಯಾರ್ಕ್ ಮೂಲದ ಸುದ್ದಿ ನಿಯತಕಾಲಿಕವಾಗಿದೆ. ಇದು 1923 ರಲ್ಲಿ ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.