ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಮೀಸಲು ನಿಧಿಯ ಪ್ರಮಾಣ ನಿರ್ಧರಿಸಲು ರಚಿಸಲಾಗಿರುವ ಬಿಮಲ್ ಜಲನ್ ಸಮಿತಿಯು ಮುಂದಿನ ಸೋಮವಾರ (ಜೂ. 24) ತನ್ನ ವರದಿ ಸಲ್ಲಿಸಲಿದೆ.

ಆರ್‌ಬಿಐ ಬಳಿ ಇರುವ ₹ 9.6 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳದ ಒಂದು ಮೂರಾಂಶದಷ್ಟು ಮೊತ್ತವನ್ನು ಸರ್ಕಾರದ ಬೊಕ್ಕಸಕ್ಕೆ ವರ್ಗಾಯಿಸಬೇಕು ಎಂದು ಸಮಿತಿ ಶಿಫಾರಸು ಮಾಡುವ ಸಾಧ್ಯತೆ ಇದೆ.

ಸಮಿತಿಯ ವರದಿಯು ಸರ್ಕಾರದ ಪರ ಇರಲಿದೆ. ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಮೊದಲೇ ವರದಿ ಸಲ್ಲಿಕೆಯಾಗಲಿದೆ.

ಮೀಸಲು ನಿಧಿಯ ದೊಡ್ಡ ಮೊತ್ತವು ಬೊಕ್ಕಸಕ್ಕೆ ವರ್ಗಾವಣೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಕೇಂದ್ರ ಸರ್ಕಾರ 2019–20ರ ಸಾಲಿನ ಬಜೆಟ್ ಗಾತ್ರವನ್ನು ಮಧ್ಯಂತರ ಬಜೆಟ್‌ನಲ್ಲಿನ ₹ 27 ಲಕ್ಷ ಕೋಟಿಗಳಿಂದ ₹ 28 ಲಕ್ಷ ಕೋಟಿಗೆ ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ.

ಸಮಿತಿಯ ಸದಸ್ಯರಲ್ಲಿ ಕಂಡು ಬಂದಿದ್ದ ಭಿನ್ನಾಭಿಪ್ರಾಯವು ಬಹುತೇಕ ದೂರವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆರ್‌ಬಿಐ, ತನ್ನ ವರಮಾನದ ಬಹುಭಾಗವನ್ನು ಪ್ರತಿ ವರ್ಷ ಸರ್ಕಾರಕ್ಕೆ ವರ್ಗಾಯಿಸುತ್ತಿದೆ. 2009–10 ಮತ್ತು 2018–19ರ ಅವಧಿಯಲ್ಲಿ ₹ 3.8 ಲಕ್ಷ ಕೋಟಿಯನ್ನು ಲಾಭಾಂಶ ವಿತರಣೆ ರೂಪದಲ್ಲಿ ಪಾವತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.