ನವದೆಹಲಿ: 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ನ ನಿವ್ವಳ ಲಾಭದಲ್ಲಿ ಶೇ 5ರಷ್ಟು ಏರಿಕೆಯಾಗಿದ್ದು, ಒಟ್ಟು ₹3,344 ಕೋಟಿ ಗಳಿಸಿದೆ.

ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ₹3,191 ಕೋಟಿ ಲಾಭಗಳಿಸಲಾಗಿತ್ತು. ಒಟ್ಟು ₹15,900 ಕೋಟಿ ವರಮಾನಗಳಿಸಲಾಗಿದೆ ಎಂದು ಬ್ಯಾಂಕ್, ಶನಿವಾರ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ₹11,193 ಕೋಟಿ ಬಡ್ಡಿ ವರಮಾನಗಳಿಸಿತ್ತು. ಈ ಅವಧಿಯಲ್ಲಿ ₹13,216 ಕೋಟಿ ಗಳಿಸಿದೆ. ನಿವ್ವಳ ಬಡ್ಡಿ ವರಮಾನದಲ್ಲಿ ಶೇ 11ರಷ್ಟು ಏರಿಕೆಯಾಗಿದ್ದು, ಒಟ್ಟು ₹7,020 ಕೋಟಿ ಗಳಿಸಿದೆ.

ಬ್ಯಾಂಕ್ನ ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 1.72ರಿಂದ ಶೇ 1.49ಕ್ಕೆ ಇಳಿಕೆಯಾಗಿದೆ. ಆದರೆ, ನಿವ್ವಳ ಎನ್ಪಿಎ ಶೇ 0.37ರಿಂದ ಶೇ 0.43ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.