ಚೆನ್ನೈ: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶ್ರೀಪೆರಂಬದೂರು ಬಳಿ ಇರುವ ಸ್ಯಾಮ್ಸಂಗ್ ಕಂಪನಿಯ ನೌಕರರು ನಡೆಸುತ್ತಿರುವ ಮುಷ್ಕರ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಉತ್ತಮ ವೇತನದ ಪ್ಯಾಕೇಜ್ ನೀಡುವಂತೆ ಕಂಪನಿಯ ಆಡಳಿತ ಮಂಡಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಈಗಾಗಲೇ, ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಇದೆ. ಕಂಪನಿಯು ಇದಕ್ಕೆ ಮಾನ್ಯತೆ ನೀಡದ ಕಾರಣ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ನೌಕರರು ತಿಳಿಸಿದ್ದಾರೆ.

‘ಬುಧವಾರ ಕಾರ್ಮಿಕರೊಂದಿಗೆ ಸಭೆ ನಡೆಸಲಾಗಿದೆ. ಶುಕ್ರವಾರ ಮತ್ತೊಂದು ಸಭೆ ನಡೆಸಲಾಗುವುದು’ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ನೌಕರರ ಕ್ಷೇಮವೇ ಪ್ರಮುಖ ಆದ್ಯತೆಯಾಗಿದೆ. ಕಾರ್ಮಿಕರ ಕುಂದುಕೊರತೆ ಆಲಿಸಲು ಸಿದ್ಧ’ ಎಂದು ಸ್ಯಾಮ್ಸಂಗ್ ಕಂಪನಿ ಪ್ರತಿಕ್ರಿಯಿಸಿದೆ. ಈ ಕಂಪನಿಯಲ್ಲಿ 1,750 ನೌಕರರಿದ್ದಾರೆ.

ಶೇ 30ರಷ್ಟು ನೌಕರರ ವಜಾ?

ಸ್ಯಾಮ್ಸಂಗ್ ಕಂಪನಿಯು ವಿವಿಧ ದೇಶದ ತನ್ನ ಘಟಕಗಳಲ್ಲಿ ಇರುವ ಶೇ 30ರಷ್ಟು ನೌಕರರನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ನೌಕರರನ್ನು ಕಡಿತಗೊಳಿಸಲು ಮುಂದಾಗಿದೆ. ಅಮೆರಿಕ ಯುರೋಪ್ ಏಷ್ಯಾ ಮತ್ತು ಆಫ್ರಿಕಾದಲ್ಲಿರುವ ತನ್ನ ಘಟಕಗಳಲ್ಲಿನ ನೌಕರರನ್ನು ವಜಾಗೊಳಿಸಲು ಮುಂದಾಗಿದೆ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.