‘ಕರ್ನಾಟಕದಲ್ಲಿ ಸೆಸ್ ಹೆಚ್ಚಿಸಿದ್ದು ಏಕೆ’
‘ಕರ್ನಾಟಕ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ಏರಿಕೆ ಮಾಡಿದ್ದು ಏಕೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ಮೊದಲು ಉತ್ತರ ನೀಡಬೇಕಿದೆ’ ಎಂದು ಸಚಿವೆ ನಿರ್ಮಲಾ ತರಾಟೆಗೆ ತೆಗೆದುಕೊಂಡರು.
‘ಕರ್ನಾಟಕ ಮತ್ತು ಹಿಮಾಚಲಪ್ರದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ಕಡಿತಗೊಳಿಸಲು ಕ್ರಮ ಕೈಗೊಳ್ಳುವಂತೆ ನೀವು ಆ ಸರ್ಕಾರಗಳಿಗೆ ಸೂಚಿಸಬೇಕಿದೆ’ ಎಂದರು.
‘ನಿಮ್ಮ ಪಕ್ಷಗಳು ಆಡಳಿತ ನಡೆಸುತ್ತಿ ರುವ ರಾಜ್ಯಗಳನ್ನು ಪ್ರಶ್ನಿಸುವ ಅಧಿಕಾರವೇ ನಿಮಗಿಲ್ಲ. ಆದರೆ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಮಂಡಿಸುವುದು ಏಕೆ’ ಎಂದು ಪ್ರಶ್ನಿಸಿದರು.