ಮ್ಯೂಚುವಲ್ ಫಂಡ್ಗಳಲ್ಲಿ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ತಾಳ್ಮೆ ಮತ್ತು ನಿರ್ದಿಷ್ಟ ಗುರಿ ಬಹಳ ಮುಖ್ಯ. ಅನೇಕರು ಇಂದು ಷೇರು ಹೂಡಿಕೆ ಮಾಡಿ ನಾಳೆ ಲಾಭ ಬೇಕು ಎಂದು ನಿರೀಕ್ಷೆ ಮಾಡುತ್ತಾರೆ, ಕೆಲವರು ಅಲ್ಪಾವಧಿಯಲ್ಲಿ ಹೆಚ್ಚು ಲಾಭ ಮಾಡುವ ಉದ್ದೇಶದಿಂದ ಅತಿಯಾದ ಹೂಡಿಕೆ ಮಾಡಲು ಹೋಗಿ ಬಳಿಯಲ್ಲಿ ಇರುವ ಹಣವನ್ನೂ ಕಳೆದುಕೊಳ್ಳುತ್ತಾರೆ. ಹೂಡಿಕೆ ಮಾಡುವಾಗ ಯಾವ ಲೆಕ್ಕಾಚಾರ ಅನುಸರಿಸಬೇಕು. ಮಾರುಕಟ್ಟೆ ಕುಸಿತದ ಹಾದಿಯಲ್ಲಿರುವಾಗ ಏನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡುವ ಮಾಹಿತಿ ಇಲ್ಲಿದೆ.

ದೀರ್ಘಾವಧಿ ಹೂಡಿಕೆ ಮಾಡಿ, ನಷ್ಟ ತಪ್ಪಿಸಿ: ‘ಕನಿಷ್ಠ 10 ವರ್ಷವಾದರೂ ಹೂಡಿಕೆ ಮಾಡಲು ಸಾಧ್ಯವಿಲ್ಲದಿದ್ದರೆ ಷೇರು ಮಾರುಕಟ್ಟೆ ಕಡೆಗೆ ತಲೆ ಹಾಕಬೇಡಿ’ ಎಂದು ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ.

ಈ ಮಾತು ಕೋವಿಡ್ ಕಾಲದಲ್ಲಿ ಅಕ್ಷರಶಃ ನಿಜವಾಗಿದೆ. ಜನವರಿ 14 ರಂದು 41,952 ಅಂಶಗಳಲ್ಲಿ ಇದ್ದ ಸೆನ್ಸೆಕ್ಸ್ ಸೂಚ್ಯಂಕ ಕೋವಿಡ್ ಪ್ರಕರಣಗಳು ಜಾಗತಿಕವಾಗಿ ಹೆಚ್ಚಳವಾಗುತ್ತಾ ಸಾಗಿದಂತೆ ಮಾರ್ಚ್ 23 ರ ವೇಳೆಗೆ 25,981 ಕ್ಕೆ ಕುಸಿಯಿತು. ಅಂದರೆ ಮಾರುಕಟ್ಟೆ ಏಕಾಏಕಿ ಶೇ 38 ರಷ್ಟು ಇಳಿಕೆಯಾಯಿತು. ಇದೀಗ ಜುಲೈ 3 ರ ವೇಳೆಗೆ 36,000 ಅಂಶಗಳ ಗಡಿ ದಾಟಿರುವ ಸೆನ್ಸೆಕ್ಸ್ ಶೇ 26 ರಷ್ಟು ಚೇತರಿಕೆ ಕಂಡಿದೆ. ಯಾರು ಈ ಏರಿಳಿತದಲ್ಲಿ ಹೂಡಿಕೆ ಹಿಂಪಡೆದರೋ ಅವರು ನಷ್ಟ ಅನುಭವಿಸಿದ್ದಾರೆ. ಯಾರು ಕೋವಿಡ್ ಹೆಚ್ಚಳದ ನಡುವೆಯೂ ಹೂಡಿಕೆ ಹಿಂಪಡೆಯದೆ ಮುಂದುವರಿಸಿಕೊಂಡು ಹೋದರೋ ಅವರು ನಷ್ಟದಿಂದ ಪಾರಾಗಿದ್ದಾರೆ.

ಸರಳವಾಗಿ ಹೇಳುವುದಾದರೆ ದೀರ್ಘಾವಧಿ ಹೂಡಿಕೆ ಮಾಡಿದರೆ ಷೇರು ಮಾರುಕಟ್ಟೆಯಲ್ಲಿ ನಷ್ಟದ ಸಾಧ್ಯತೆ ತೀರಾ ಕಡಿಮೆ ಎನ್ನುವುದು ಮತ್ತೆ ಸಾಬೀತಾಗಿದೆ. ಮ್ಯೂಚುವಲ್ ಫಂಡ್ಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ–ಸಿಪ್) ಆರಂಭಿಸಿದರೆ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಸಾಗಬಹುದು. ಮಾರುಕಟ್ಟೆ ಏರಿಳಿತದ ಲಾಭ ಕೂಡ ಎಸ್ಐಪಿ ಮಾಡುವುದರಿಂದ ಸಿಗುತ್ತದೆ.

ಅರಿತು ಹೂಡಿಕೆ ಮಾಡಿ: ಮ್ಯೂಚುವಲ್ ಫಂಡ್ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಇರುವ ಹಣವನ್ನೆಲ್ಲಾ ಹೂಡಿಕೆ ಮಾಡುವ ಧಾವಂತಕ್ಕೆ ಬೀಳಬಾರದು. ನಾವು ಎಷ್ಟು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಸಾಧ್ಯ, ಭವಿಷ್ಯದಲ್ಲಿ ನಮ್ಮ ಹಣಕಾಸಿನ ಅಗತ್ಯಗಳೇನು, ಮಾರುಕಟ್ಟೆ ಏರಿಳಿತದಿಂದ ನಮ್ಮ ಹೂಡಿಕೆಗೆ ತಾತ್ಕಾಲಿಕ ನಷ್ಟವಾದರೆ ಅದನ್ನು ನಿಭಾಯಿಸಲು ಸಾಧ್ಯವಿದೆಯೇ ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

41,954 ಅಂಶಗಳಿಂದ 25,981 ಅಂಶಗಳಿಗೆ ಕುಸಿತ ಕಂಡಿದ್ದ ಸೆನ್ಸೆಕ್ಸ್ ಸೂಚ್ಯಂಕ ಈಗ 36,000 ಅಂಶಗಳಲ್ಲಿ ಇದೆ. ಆದರೆ ಸೆನ್ಸೆಕ್ಸ್ ಹೀಗೆಯೇ ಏರುಗತಿಯಲ್ಲೇ ಸಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಜಾಗತಿಕ ಬೆಳವಣಿಗೆಗಳು, ಕೋವಿಡ್ ಪ್ರಕರಣಗಳಲ್ಲಿನ ಸ್ಥಿತಿಗತಿ, ಕೋವಿಡ್ಗೆ ಔಷಧಿ ಪತ್ತೆ ಸಾಧ್ಯತೆ ಹೀಗೆ ಹತ್ತಾರು ಅಂಶಗಳನ್ನು ಮಾರುಕಟ್ಟೆ ಅವಲಂಬಿಸಿದೆ. ಆದರೆ ಮಾರುಕಟ್ಟೆಯಲ್ಲಿ ದೀರ್ಘಾವಧಿ ಹೂಡಿಕೆ ಮಾಡುವುದರಿಂದ ಮಾತ್ರ ಯಾವುದೇ ರೀತಿಯ ನಷ್ಟವನ್ನು ತಪ್ಪಿಸಬಹುದು ಎನ್ನುವುದನ್ನು ಇತಿಹಾಸ ಹೇಳುತ್ತದೆ.

ಸಲಹೆಗಳು

1. ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಸದ್ಯ ಹಿಂದೆ ಪಡೆಯಲು ಹೋಗಬೇಡಿ.

2. ರಿಸ್ಕ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಎಂದರೆ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ಗಳ ಕಡೆಗೆ ಸದ್ಯಕ್ಕೆ ತಲೆ ಹಾಕಬೇಡಿ.

3. ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದೀರಿ ಎಂದಾದಲ್ಲಿ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ಹಣ ತೊಡಗಿಸಿ.

4. ಒಂದೇ ಬಾರಿಗೆ ಹೆಚ್ಚು ಹಣ ಹೂಡಿಕೆ ಮಾಡಬೇಕು ಎಂದರೆ ಎಸ್ಟಿಪಿ ಅಂದರೆ ಸಿಸ್ಟಮ್ಯಾಟಿಕ್ ಟ್ರಾನ್ಸ್ಫರ್ ಪ್ಲ್ಯಾನ್ ( ವ್ಯವಸ್ಥಿತ ವರ್ಗಾವಣೆ ಯೋಜನೆ) ಬಳಸಿ ಹೂಡಿಕೆ ಮಾಡಿ. ಇದರಿಂದ ಮಾರುಕಟ್ಟೆಯ ಏರಿಳಿತ ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ.

ದಿನ;ಸೂಚ್ಯಂಕದ ಮಟ್ಟ;ಏರಿಳಿತ

ಜನವರಿ 14;41,952;

ಮಾರ್ಚ್ 23;25,981;38 % ಇಳಿಕೆ

ಜುಲೈ 3;36,021;26% ಏರಿಕೆ

ಸತತ ಮೂರನೇ ವಾರ ಜಿಗಿದ ಷೇರುಪೇಟೆ

ಸತತ ಮೂರನೇ ವಾರವೂ ಷೇರು ಮಾರುಕಟ್ಟೆ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡು ಬಂದಿವೆ. 36,021 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 2.4 ರಷ್ಟು ಏರಿಕೆ ಕಂಡಿದೆ. 10,607 ಅಂಶಗಳೊಂದಿಗೆ ನಿಫ್ಟಿ ಶೇ 2.1 ರಷ್ಟು ಹೆಚ್ಚಳ ಕಂಡಿದೆ. ಇನ್ನು ಸೆನ್ಸೆಕ್ಸ್ ಮಿಡ್ ಕ್ಯಾಪ್ ಶೇ 0.2 ರಷ್ಟು ಏರಿಕೆ ಕಂಡಿದ್ದರೆ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 0.21 ರಷ್ಟು ಹಿನ್ನಡೆ ಅನುಭವಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಪೂರಕ ಬೆಳವಣಿಗಳು, ಜಿಎಸ್ಟಿ ಸಂಗ್ರಹದಲ್ಲಿ ಹೆಚ್ಚಳ, ಕೋವಿಡ್ಗೆ ಶೀಘ್ರ ಲಸಿಕೆ ಸಾಧ್ಯತೆ, ವಾಹನ ಮಾರಾಟದಲ್ಲಿ ಕೊಂಚ ಮಟ್ಟಿಗಿನ ಸುಧಾರಣೆ, ದೇಶಿಯ ಸಾಂಸ್ಥಿಕ ಹೂಡಿಕೆದಾರರಿಂದ ಹೂಡಿಕೆ ಸುಧಾರಣೆ ಸೇರಿ ಅನೇಕ ಸಂಗತಿಗಳು ಮಾರುಕಟ್ಟೆ ಜಿಗಿತಕ್ಕೆ ಸಹಕರಿಸಿವೆ. ಆದರೆ ಕೋವಿಡ್ ಪ್ರಕರಣಗಳ ಹೆಚ್ಚಳ ಮತ್ತು ಅಮೆರಿಕ – ಚೀನಾ ನಡುವಣ ಬಿಕ್ಕಟ್ಟು ಹೂಡಿಕೆದಾರರ ಹಿಂಜರಿಕೆಗೆ ಕಾರಣಗಳಾಗಿವೆ.

ಏರಿಕೆ- ಇಳಿಕೆ: ಸೆನ್ಸೆಕ್ಸ್ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 3 ರಷ್ಟು ಏರಿಕೆ ಕಂಡಿದೆ. ಹೀರೊ ಮೋಟೊ ಕಾರ್ಪ್, ಎಸ್ಬಿಐ ಲೈಫ್, ಎಚ್ಡಿಎಫ್ಸಿ, ಐಟಿಸಿ, ಸೇರಿ ಪ್ರಮುಖ ಕಂಪನಿಗಳು ಸೂಚ್ಯಂಕದ ಜಿಗಿತಕ್ಕೆ ಕೊಡುಗೆ ನೀಡಿವೆ. ಆದರೆ, ಪವರ್ ಫೈನಾನ್ಸ್ ಕಾರ್ಪೊರೇಷನ್, ಎಚ್ಪಿಸಿಎಲ್, ಅಶೋಕ್ ಲೇಲ್ಯಾಂಡ್ ಮತ್ತು ಕೋಲ್ ಇಂಡಿಯಾ ಕುಸಿತ ಕಂಡಿವೆ.

ಸೆನ್ಸೆಕ್ಸ್ ಮಿಡ್ ಕ್ಯಾಪ್ನಲ್ಲಿ ಐಡಿಬಿಐ ಬ್ಯಾಂಕ್, ಹೌಸಿಂಗ್ ಆ್ಯಂಡ್ ಅರ್ಬನ್ ಡೆಪಲಪ್ಮೆಂಟ್ ಕಾರ್ಪೊರೇಷನ್, ಹಿಂದೂಸ್ಥಾನ್ ಏರೊನಾಟಿಕ್ಸ್ , ಸ್ಟೆರ್ಲೈಟ್ ಟೆಕ್ನಾಲಜೀಸ್ ಮತ್ತು ಟಾಟಾ ಪವರ್ ಏರಿಕೆ ಕಂಡಿವೆ. ಫ್ಯೂಚರ್ ಕನ್ಸೂಮರ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾ, ಯುಕೊ ಬ್ಯಾಂಕ್ ಕುಸಿದಿವೆ.
ವಲಯವಾರು ಪ್ರಗತಿಯಲ್ಲಿ ನಿಫ್ಟಿ ಆಟೊ, ಎಫ್ಎಂಸಿಜಿ ಮತ್ತು ಐಟಿ ಸೂಚ್ಯಂಕ ಏರಿಕೆಯಾಗಿವೆ. ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 4 ರಷ್ಟು ಕುಸಿದಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕದಾರರು ₹ 5,333.02 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 5,041.25 ಕೋಟಿ ತೊಡಗಿಸಿದ್ದಾರೆ.

ಮುನ್ನೋಟ: ಗ್ರಾಹಕ ಬೆಲೆ ಸೂಚ್ಯಂಕ, ಸಗಟು ಬೆಲೆ ಸೂಚ್ಯಂಕ, ಕೈಗಾರಿಕೆ ಉತ್ಪಾದನೆ ಅಂಕಿ-ಅಂಶ, ಸೇರಿ ಪ್ರಮುಖ ದತ್ತಾಂಶಗಳ ಮೇಲೆ ಈ ವಾರ ಹೂಡಿಕೆದಾರರ ದೃಷ್ಟಿ ನೆಟ್ಟಿರುತ್ತದೆ. ಕೋವಿಡ್ ಬೆಳವಣಿಗೆಗಳು, 2020ನೇ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕ ಅವಧಿಯ ಫಲಿತಾಂಶಗಳನ್ನು ಕಂಪನಿಗಳು ಪ್ರಕಟಿಸಲಿವೆ. 9 ರಂದು ಟಿಸಿಎಸ್ ಫಲಿತಾಂಶ ಹೊರಬೀಳಲಿದೆ. ಐಎಫ್ಬಿ ಇಂಡಸ್ಟ್ರೀಸ್ , ಎಚ್ಪಿ ಕಾಟನ್, ಸುಜಲಾನ್ , ಡಿಷ್ ಟಿವಿ, ಪ್ರಿಸಿಷನ್ , ಸೌತ್ ಬ್ಯಾಂಕ್, ಐಆರ್ಸಿಟಿಸಿ, ಕರ್ಣಾಟಕ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಹೊರಬೀಳಲಿದೆ.

(ಲೇಖಕ, ಸುವಿಷನ್ ಹೋಲ್ಡಿಂಗ್ಸ್ ಪ್ರೈ. ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.