ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರ ಇಳಿಕೆ ಕಂಡಿವೆ. ಲೋಹ ಹಾಗೂ ಬ್ಯಾಂಕಿಂಗ್ ಷೇರುಗಳು ಮಾರಾಟಕ್ಕೆ ಒತ್ತಡಕ್ಕೆ ಸಿಲುಕಿದ್ದ ಕೂಡ ಕುಸಿತಕ್ಕೆ ಕಾರಣವಾಯಿತು.

ಎರಡು ದಿನಗಳ ಹಿಂದೆ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 616 ಅಂಶ (ಶೇ 0.83) ಇಳಿಕೆ ಕಂಡು 73,502ರಲ್ಲಿ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 685 ಅಂಶ ಕುಸಿದು, 73,433 ಅಂಶಗಳಿಗೆ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 160 ಅಂಶ ಇಳಿಕೆ ಕಂಡು (ಶೇ 0.72) 22,332ರಲ್ಲಿ ವಹಿವಾಟನ್ನು ಅಂತ್ಯಗೊಳಿಸಿತು.

‘ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತ ಮಾಡುವುದರ ಬಗ್ಗೆ ಅನಿಶ್ಚಿತತೆ ತಲೆದೋರಿದೆ. ಇದು ದೇಶೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಅಲ್ಲದೆ, ಮಂಗಳವಾರ ಅಮೆರಿಕದ ಹಣದುಬ್ಬರ ಕುರಿತ ವರದಿ ಬಿಡುಗಡೆಯಾಗಲಿದೆ. ಈ ಎಲ್ಲಾ ಅಂಶಗಳು ಷೇರುಪೇಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯಸ್ಥ (ಸಂಶೋಧನೆ) ವಿನೋದ್ ನಾಯರ್ ಹೇಳಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರು ₹7,304 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಜಪಾನ್ ಷೇರುಪೇಟೆ ನಿಕ್ಕಿ ಶೇ 2.2 ಹಾಗೂ ದಕ್ಷಿಣ ಕೊರಿಯಾ ಶೇ 0.8ರಷ್ಟು ಕುಸಿತ ಕಂಡಿವೆ. ಹಾಂಗ್‌ಕಾಂಗ್ ಶೇ 1.4ರಷ್ಟು ಹಾಗೂ ಶಾಂಘೈ ಮಾರುಕಟ್ಟೆ ಶೇ 0.7ರಷ್ಟು ಏರಿಕೆ ಕಂಡಿವೆ. ಬ್ರೆಂಟ್ ಕಚ್ಚಾ ತೈಲ ಶೇ 0.29ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 82.32 ಡಾಲರ್‌ಗೆ ತಲುಪಿದೆ.

ಎಸ್‌ಬಿಐ ಷೇರು ಇಳಿಕೆ:

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಗಡುವು ವಿಸ್ತರಣೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಎಸ್‌ಬಿಐ ಷೇರಿನ ಮೌಲ್ಯ ಶೇ 2ರಷ್ಟು ಕುಸಿದಿದೆ.

ಸಾರ್ವಜನಿಕ ಸಾಲದ ವಿತರಣೆಗೆ ಸಂಬಂಧಿಸಿದಂತೆ ಸೆಬಿ ವಿಧಿಸಿರುವ ನಿರ್ಬಂಧದಿಂದಾಗಿ ಜೆಎಂ ಫೈನಾನ್ಶಿಯಲ್ ಷೇರಿನ ಮೌಲ್ಯ ಶೇ 10ರಷ್ಟು ಕುಸಿದಿದೆ. ಪವರ್ ಗ್ರಿಡ್, ಟಾಟಾ ಸ್ಟೀಲ್ ಷೇರಿನ ಮೌಲ್ಯ ಶೇ 2ರಷ್ಟು ಕುಸಿದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಹಿಂದುಸ್ತಾನ್ ಯೂನಿಲಿವರ್ ಹಾಗೂ ಎನ್‌ಟಿಪಿಸಿ ಇಳಿಕೆ ಕಂಡಿವೆ.

ನೆಸ್ಟ್ಲೆ, ಬಜಾಜ್ ಫಿನ್‌ಸರ್ವ್ ಹಾಗೂ ಬಜಾಜ್ ಫೈನಾನ್ಸ್ ಗಳಿಕೆ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.