ನವದೆಹಲಿ: ತನ್ನ ಮುಂಬರುವ ಮಧ್ಯಮ ಗಾತ್ರದ ಎಸ್‌ಯುವಿ ವಾಹನಗಳಲ್ಲಿ ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ವೈಶಿಷ್ಟ್ಯಗಳನ್ನು ಅಳವಡಿಸಲು ಎಂಜಿ ಮೋಟರ್ ಇಂಡಿಯಾ ಕಂಪನಿಯು ಜಿಯೊ ಜೊತೆ ಒಪ್ಪಂದ ಮಾಡಿಕೊಂಡಿದೆ.

ಮುಂಬರುವ ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಜಿಯೊದ ಅಂತರ್ಜಾಲ ಸಂಪರ್ಕದ ಪ್ರಯೋಜನವು ಗ್ರಾಹಕರಿಗೆ ಲಭ್ಯವಾಗಲಿದೆ. ಮಹಾನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಇದರ ಪ್ರಯೋಜನ ಸಿಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಎಂಜಿ ಮೋಟರ್ ವಾಹನಗಳ ಬಳಕೆದಾರರಿಗೆ ಸಂಪರ್ಕ, ಇನ್ಫೊಟೇನ್‌ಮೆಂಟ್ ಮತ್ತು ಟೆಲಿಮ್ಯಾಟಿಕ್ಸ್ ಸೌಲಭ್ಯಗಳನ್ನು ಬಳಸಲು ಜಿಯೊ ಇ–ಸಿಮ್, ಐಒಟಿ ಮತ್ತು ಸ್ಟ್ರೀಮಿಂಗ್ ವ್ಯವಸ್ಥೆಗಳು ನೆರವಾಗಲಿವೆ ಎಂದು ಜಿಯೊ ಕಂಪನಿಯ ನಿರ್ದೇಶಕ ಕಿರಣ್ ಥಾಮಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.