ಬೆಂಗಳೂರು: ಈಗ ಖರೀದಿಸಿ ಬಳಿಕ ಪಾವತಿಸಿ ಟ್ರೆಂಡ್ ಸ್ಮಾರ್ಟ್ಫೋನ್ ಖರೀದಿಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಇದೀಗ ಉಡುಪುಗಳು, ಸಂಗೀತ ಸಾಧನಗಳು, ಕಿಚನ್ ಯಾಂತ್ರೀಕರಣದಂಥ ಹೊಸ ವರ್ಗಗಳಿಗೆ ಲಗ್ಗೆ ಇಟ್ಟಿದೆ. ಇಷ್ಟು ಮಾತ್ರವಲ್ಲದೇ ಮನೆಯಲ್ಲೇ ಇರುವ, ಮನೆಯಿಂದಲೇ ಕೆಲಸ ನಿರ್ವಹಿಸುವ ವಾತವರಣದಲ್ಲಿ ಕೂದಲು ಚಿಕಿತ್ಸೆ ಉತ್ಪನ್ನಗಳಿಗೆ ಕೂಡಾ ಲಗ್ಗೆ ಇಟ್ಟಿದೆ.

ಸಂಶೋಧನೆಗಳಿಂದ ತಿಳಿದುಬಂದಂತೆ, ಭಾರತದ ಸಿಲಿಕಾನ್ ಸಿಟಿ ಜನ ಮೊದಲು ಖರೀದಿಸಿ, ನಂತರ ಪಾವತಿಸುವ ಬಿಎನ್ಪಿಎಲ್ ಸೌಲಭ್ಯವನ್ನು ವೈಯಕ್ತಿಕ ಕಾಳಜಿ, ಅದರಲ್ಲೂ ಮುಖ್ಯವಾಗಿ ಕೂದಲು ಉದುರುವಿಕೆ ಮತ್ತು ತೆಳ್ಳಗಾಗುವಿಕೆ ಚಿಕಿತ್ಸೆಗೂ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾತ್ರವಲ್ಲದೇ ಎಂಸ್ವೈಪ್ನ ವ್ಯಾಪಾರಿಗಳು ಮುಂಬಯಿ ಹಾಗೂ ದೆಹಲಿಯಲ್ಲಿ ಕೂಡಾ ಈ ವ್ಯವಸ್ಥೆಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳುವುದನ್ನು ಕಾಣುತ್ತಿದ್ದಾರೆ.

ಕೋವಿಡ್-19ನಿಂದಾಗಿ ಮೆಟ್ರೊ ನಗರಗಳಲ್ಲಿ ಇನ್ನೂ ಹೆಚ್ಚಿನ ಆತಂಕ ಇರುವುದನ್ನು ಇದು ಸೂಚಿಸುತ್ತದೆ. ಬೆಂಗಳೂರಿನ ಜನ ಇಎಂಐನಲ್ಲಿ ಖರೀದಿ ಮಾಡುವ ಇನ್ನೊಂದು ಪ್ರಮುಖ ವರ್ಗವೆಂದರೆ ಸಂಗೀತ ಸಾಧನಗಳು. ಗಿಟಾರ್ ಹಾಗೂ ಪಿಯಾನೊ ಸೇರಿದಂತೆ ಹಲವು ಸಂಗೀತ ಸಾಧನಗಳು ಇದರಲ್ಲಿ ಸೇರಿವೆ.

ಎಂಸ್ವೈಪ್ನ ವಿಭಿನ್ನ ಮಾರಾಟ ವರ್ಗಗಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಈ ಒಳನೋಟಗಳು ಲಭ್ಯವಾಗಿವೆ. ಎಂಸ್ವೈಪ್ನ ಈಗ ಖರೀದಿಸಿ, ಮತ್ತೆ ಪಾವತಿಸಿ ಸೌಲಭ್ಯವನ್ನು ಅಥವಾ ಚೆಕೌಟ್ ಫೈನಾನ್ಸ್ ಸೌಲಭ್ಯವನ್ನು ತನ್ನ ಇಎಂಐ ಕೊಡುಗೆಗಳ ಮೂಲಕ ಮೊಬೈಲ್, ಗ್ರಾಹಕ ವಸ್ತುಗಳು, ಶಿಕ್ಷಣ, ಆರೋಗ್ಯ, ಪೀಠೋಪಕರಣ, ಸುಕ್ಷೇಮ ಮತ್ತು ಐಷಾರಾಮಿ ವಲಯದ ಎಸ್ಎಂಇಗಳಿಗೆ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.