ದೆಹಲಿ: ಪಂಡೋರಾ ಪೇಪರ್ ಪ್ರಕರಣವನ್ನು ‘ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)’ ಅಧ್ಯಕ್ಷರ ನೇತೃತ್ವದ ಏಜೆನ್ಸಿಗಳು ತನಿಖೆ ನಡೆಸಲಿವೆ ಎಂದು ಸಿಬಿಡಿಟಿ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಇದನ್ನೂ ಓದಿ:Pandora Papers: ಸಚಿನ್, ಶಕೀರಾ ಸೇರಿ ಜಗತ್ತಿನ ಗಣ್ಯರ ಹೂಡಿಕೆ ದಾಖಲೆಗಳು ಸೋರಿಕೆ

ಸಿಬಿಡಿಟಿ, ಜಾರಿ ನಿರ್ದೇಶನಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ಗುಪ್ತಚರ ಘಟಕದ ಪ್ರತಿನಿಧಿಗಳನ್ನು ಒಳಗೊಂಡ ಸಿಬಿಡಿಟಿಅಧ್ಯಕ್ಷರ ನೇತೃತ್ವದ ತಂಡ ಪಂಡೋರಾ ಪೇಪರ್ಸ್ ಸೋರಿಕೆ ಪ್ರಕರಣಗಳ ತನಿಖೆಯ ಮೇಲ್ವಿಚಾರಣೆ ಮಾಡಬೇಕು ಎಂದು ಸರ್ಕಾರ ನಿರ್ದೇಶಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಸೋಮವಾರ ವರದಿ ಮಾಡಿದೆ.

ಜಗತ್ತಿನ ಹತ್ತಾರು ರಾಷ್ಟ್ರಗಳ ಹಾಲಿ ಮತ್ತು ಮಾಜಿ ಮುಖಂಡರು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು, ಡ್ರಗ್ ಡೀಲರ್ಗಳು ಹಾಗೂ ಅಧಿಕಾರಿಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ. 'ಪಂಡೋರಾ ಪೇಪರ್ಸ್' ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಭಾರತ ಸೇರಿದಂತೆ 91 ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಹೊರರಾಷ್ಟ್ರಗಳಲ್ಲಿ ಮಾಡಿರುವ ರಹಸ್ಯ ಹೂಡಿಕೆಗಳ ಮಾಹಿತಿ ಬಹಿರಂಗವಾಗಿದೆ.

ಇದನ್ನೂ ಓದಿ:Explainer: ಏನಿದು ಪಂಡೋರಾ ಪೇಪರ್ಸ್?

‘ವಾಷಿಂಗ್ಟನ್ ಪೋಸ್ಟ್’, ‘ಬಿಬಿಸಿ’, ‘ದಿ ಗಾರ್ಡಿಯನ್’ ಸೇರಿದಂತೆ 150 ಮಾಧ್ಯಮಗಳ, 117 ರಾಷ್ಟ್ರಗಳ ಸುಮಾರು 600 ಪತ್ರಕರ್ತರು ಪಂಡೋರಾ ಪೇಪರ್ಸ್ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಜಗತ್ತಿನಾದ್ಯಂತ ಇರುವ 14 ಹಣಕಾಸು ಸೇವಾ ಕಂಪನಿಗಳ ಸುಮಾರು 11.9 ದಶಲಕ್ಷ ದಾಖಲೆಗಳು ಸೋರಿಕೆಯಾಗಿವೆ. ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟವು (ಐಸಿಐಜೆ) ಭಾನುವಾರ ವರದಿ ಬಿಡುಗಡೆ ಮಾಡಿದೆ.

ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಪಾಂಪ್ ಮ್ಯೂಸಿಕ್ ತಾರೆ ಶಕೀರಾ, ಸೂಪರ್ಮಾಡೆಲ್ ಕ್ಲೌಡಿಯಾ ಶಿಫರ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೆಸರುಗಳಿರುವುದು ಪತ್ತೆಯಾಗಿದೆ. ಉದ್ಯಮಿ ಅನಿಲ್ ಅಂಬಾನಿಗೆ ಸೇರಿದ 1.3 ಬಿಲಿಯನ್ ಡಾಲರ್ (ಅಂದಾಜು ₹9,640 ಕೋಟಿ) ಮೌಲ್ಯದ ಸಾಗರೋತ್ತರ ವ್ಯವಹಾರಗಳ ವಿವರಗಳೂ ಇದರಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.