ಮುಂಬೈ: ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್ಬಿಎಫ್ಸಿ) ವಸೂಲಾಗದ ಸಾಲದ ಪ್ರಮಾಣ (ಎನ್ಪಿಎ) 2021ರ ಮಾರ್ಚ್ ಅಂತ್ಯಕ್ಕೆ ಶೇ 5 ರಿಂದ ಶೇ 7ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ರೇಟಿಂಗ್ ಸಂಸ್ಥೆ ಇಕ್ರಾ ಹೇಳಿದೆ.

2020ರ ಮಾರ್ಚ್ನಲ್ಲಿ ಎನ್ಪಿಎ ಪ್ರಮಾಣ ಶೇ 3.3–3.4ರಷ್ಟಿತ್ತು.

ಲಾಕ್ಡೌನ್ನಿಂದಾಗಿ ಎನ್ಬಿಎಫ್ಸಿಗಳಿಗೆ ನಗದು ಹರಿವು ಕಡಿಮೆಯಾಗಿದೆ. ಆದರೆ, ಸಾಲದ ಕಂತು ಪಾವತಿ ಅವಧಿ ಮುಂದೂಡಿಕೆಯಿಂದಾಗಿ ತುಸು ನಿಟ್ಟುಸಿರು ಬಿಡುವಂತಾಗಿದೆ.

ಗೃಹ ಹಣಕಾಸು ಕಂಪನಿಗಳಿಗಿಂತಲೂ ಎನ್ಬಿಎಫ್ಸಿಗಳ ಸಂಪತ್ತಿನ ಮೇಲೆ ನಕಾರಾತ್ಮಕ ಪರಿಣಾಮ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.