ನವದೆಹಲಿ: ತಯಾರಿಕಾ ವೆಚ್ಚದಲ್ಲಿ ಏರಿಕೆ ಆಗುತ್ತಿರುವುದರಿಂದ ಹೊಸ ವರ್ಷದಿಂದ ಬೆಲೆ ಏರಿಕೆ ಮಾಡಲು ಕಾರ್ ಕಂಪನಿಗಳು ನಿರ್ಧರಿಸಿವೆ.

ನಿಸಾನ್ ಮೋಟರ್ ಇಂಡಿಯಾ ಕಂಪನಿಯು ಶೇ 5ರವರೆಗೂ ಬೆಲೆಯಲ್ಲಿ ಏರಿಕೆ ಮಾಡಲಿದೆ. ನಿಸಾನ್ ಮತ್ತು ಡಾಟ್ಸನ್ನ ಎಲ್ಲಾ ಮಾದರಿಗಳಿಗೂ ಇದು ಅನ್ವಯವಾಗಲಿದೆ.

ಬೆಂಜ್: ಐಷಾರಾಮಿ ಕಾರ್ ತಯಾರಿಸುವ ಮರ್ಸಿಡಿಸ್ ಬೆಂಜ್ ಕಂಪನಿ ಸಹ ಜನವರಿಯಿಂದ ಶೇ 3ರವರೆಗೆ ಬೆಲೆ ಏರಿಕೆಗೆ ಮುಂದಾಗಿದೆ.

‘ಸುಸ್ಥಿರ ವಹಿವಾಟು ನಡೆಸಲು ಬೆಲೆಯಲ್ಲಿ ಅಲ್ಪ ಮಟ್ಟಿನ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ’ ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾದ ಸಿಇಒ ಮಾರ್ಟಿನ್ ಶ್ವೆಂಕ್ ತಿಳಿಸಿದ್ದಾರೆ.

ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಹುಂಡೈ, ಹೀರೊ ಮೋಟೊಕಾರ್ಪ್ ಕಂಪನಿಗಳು ಸಹ ಜನವರಿಯಿಂದ ಬೆಲೆ ಏರಿಕೆ ಮಾಡುವುದಾಗಿ ಈಗಾಗಲೇ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.