ನವದೆಹಲಿ: ವಿದ್ಯುತ್ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಒಇಎಂಎಲ್), ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ (ಐಪಿಒ) ಮೂಲಕ ₹5,500 ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ.

ಆಗಸ್ಟ್ 2ರಿಂದ ಐಪಿಒ ಪ್ರಕ್ರಿಯೆ ಆರಂಭವಾಗಲಿದೆ. ತನ್ನ ಸೆಲ್ಯುಲರ್ ತಯಾರಿಕಾ ಘಟಕದ ಸಾಮರ್ಥ್ಯ ವಿಸ್ತರಣೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಕಂಪನಿಯು ಈ ಬಂಡವಾಳ ಸಂಗ್ರಹಿಸುತ್ತಿದೆ.

ಆರಂಭಿಕ ಹೂಡಿಕೆದಾರರು (ಆ್ಯಂಕರ್ ಇನ್ವೆಸ್ಟರ್) ಆಗಸ್ಟ್ 1ರಂದು ಬಿಡ್ ಸಲ್ಲಿಸಬಹುದಾಗಿದೆ. ಆಗಸ್ಟ್ 6ರಂದು ಈ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಕಂಪನಿಯು ಷೇರುಪೇಟೆಗೆ ಸಲ್ಲಿಸಿರುವ ಪ್ರಾಥಮಿಕ ವಿವರಣಾ ಪತ್ರದಲ್ಲಿ ತಿಳಿಸಿದೆ.

ಆಫರ್ ಫರ್ ಸೇಲ್ ಮೂಲಕ (ಒಎಫ್ಎಸ್) 8.49 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿದೆ. ಈ ಪೈಕಿ ಓಲಾ ಎಲೆಕ್ಟ್ರಿಕ್ನ ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರ ಒಡೆತನಕ್ಕೆ ಸೇರಿದ 3.8 ಕೋಟಿ ಷೇರುಗಳಿವೆ. ಪ್ರತಿ ಷೇರಿನ ಬೆಲೆಯ ಬಗ್ಗೆ ಸೋಮವಾರ ಅಧಿಕೃತವಾಗಿ ಮಾಹಿತಿ ನೀಡುವ ನಿರೀಕ್ಷೆಯಿದೆ.

ಹಾಲಿ ಇರುವ 5 ಗಿಗಾವ್ಯಾಟ್ ಸಾಮರ್ಥ್ಯದ ಸೆಲ್ಯುಲರ್ ತಯಾರಿಕಾ ಘಟಕವನ್ನು 6.4 ಗಿಗಾವ್ಯಾಟ್ಗೆ ಮೇಲ್ದರ್ಜೆಗೇರಿಸುವ ಗುರಿ ಹೊಂದಲಾಗಿದೆ. ಸಂಗ್ರಹವಾಗುವ ಬಂಡವಾಳದಲ್ಲಿ ಇದಕ್ಕಾಗಿ ₹1,227 ಕೋಟಿ ವಿನಿಯೋಗಿಸಲಾಗುವುದು ಎಂದು ಕಂಪನಿಯು ತಿಳಿಸಿದೆ.

ಸಂಶೋಧನೆ ಮತ್ತು ಉತ್ಪಾದನೆ ಹೆಚ್ಚಳಕ್ಕೆ ₹1,600 ಕೋಟಿ, ಸಾಲ ಮರುಪಾವತಿಗೆ ₹800 ಕೋಟಿ, ಆಂತರಿಕ ವ್ಯಾಪಾರದ ಅಭಿವೃದ್ಧಿಗೆ ₹350 ಕೋಟಿ ವೆಚ್ಚ ಮಾಡಲಾಗುವುದು ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.