ನವದೆಹಲಿ: ಪತಂಜಲಿ ಫುಡ್ಸ್ಗೆ ₹27.46 ಕೋಟಿ ಹೂಡುವಳಿ ತೆರಿಗೆ ಜಮೆ (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್) ಬಾಕಿಗೆ ಸಂಬಂಧಿಸಿದಂತೆ ಜಿಎಸ್ಟಿ ಗುಪ್ತಚರ ಇಲಾಖೆಯು ಷೋಕಾಸ್ ನೋಟಿಸ್ ನೀಡಿದೆ.

ಯೋಗ ಗುರು ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಆಯುರ್ವೇದ ಸಮೂಹಕ್ಕೆ ಸೇರಿದ ಈ ಸಂಸ್ಥೆಯು ಖಾದ್ಯ ತೈಲ ವ್ಯವಹಾರ ನಡೆಸುತ್ತಿದೆ. ಚಂಡೀಗಢ ವಲಯದ ಜಿಎಸ್ಟಿ ಗುಪ್ತಚರ ಮಹಾ ನಿರ್ದೇಶನಾಲಯದಿಂದ ನೋಟಿಸ್ ಸ್ವೀಕರಿಸಲಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.

ಬಡ್ಡಿಸಹಿತ ಈ ಬಾಕಿ ತೆರಿಗೆಯನ್ನು ಏಕೆ ವಸೂಲಿ ಮಾಡಬಾರದು ಹಾಗೂ ಈ ಮೊತ್ತಕ್ಕೆ ದಂಡವನ್ನು ಏಕೆ ವಿಧಿಸಬಾರದು ಎಂಬ ಬಗ್ಗೆ ಕಾರಣ ನೀಡುವಂತೆ ನೋಟಿಸ್ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದೆ.

ಕೇಂದ್ರ ಸರಕು ಮತ್ತು ಸೇವಾ ಕಾಯ್ದೆ 2017ರ ಸೆಕ್ಷನ್ 74, ಉತ್ತರಾಖಂಡ ರಾಜ್ಯ ಸರಕು ಮತ್ತು ಸೇವಾ ಕಾಯ್ದೆ 2017ರ ಸೆಕ್ಷನ್ 20 ಹಾಗೂ ಸಮಗ್ರ ಜಿಎಸ್ಟಿ (ಐಜಿಎಸ್ಟಿ) ಕಾಯ್ದೆಯಡಿ ಈ ನೋಟಿಸ್ ನೀಡಲಾಗಿದೆ.

‘ನೋಟಿಸ್ಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದ ಮುಂದೆ ಸೂಕ್ತ ವಿವರಣೆಯನ್ನು ಸಲ್ಲಿಸಲಾಗುವುದು’ ಎಂದು ಪತಂಜಲಿ ಫುಡ್ಸ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.