ಬೆಂಗಳೂರು: ಯುಪಿಐ ಮೂಲಕ ಪಾವತಿ ಸೇರಿದಂತೆ ಹಲವು ಹಣಕಾಸು ಸೇವೆಗಳನ್ನು ಒದಗಿಸುತ್ತಿರುವ ಫೋನ್ಪೆ, ಬೆಳ್ಳಿ ನಾಣ್ಯಗಳು ಮತ್ತು ಗಟ್ಟಿಗಳನ್ನು ಖರೀದಿಸಲು ತನ್ನ ಆ್ಯಪ್ ಮೂಲಕ ಅವಕಾಶ ಕಲ್ಪಿಸಿರುವುದಾಗಿ ಹೇಳಿದೆ.

ಶುದ್ಧತೆಯ ವಿಚಾರದಲ್ಲಿ ಪ್ರಮಾಣೀಕೃತ ಆಗಿರುವ ಬೆಳ್ಳಿ ನಾಣ್ಯಗಳು ಮತ್ತು ಗಟ್ಟಿಗಳಲ್ಲಿ ಹೂಡಿಕೆ ಮಾಡಲು ಇದು ಗ್ರಾಹಕರಿಗೆ ಅವಕಾಶ ಕಲ್ಪಿಸಲಿದೆ. ಗ್ರಾಹಕರು ತಾವು ಖರೀದಿಸಿದ ನಾಣ್ಯ ಅಥವಾ ಗಟ್ಟಿಗಳನ್ನು ಮನೆಗೆ ತರಿಸಿಕೊಳ್ಳಲು ತೀರ್ಮಾನಿಸಿದರೆ, ಸಾಗಾಟದ ಮೇಲೆ ವಿಮೆ ಸೌಲಭ್ಯವೂ ಇರುತ್ತದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

10 ಗ್ರಾಂ, 20 ಗ್ರಾಂ, 50 ಗ್ರಾಂ ಮತ್ತು 100 ಗ್ರಾಂ ತೂಕದ ಬೆಳ್ಳಿಯ ನಾಣ್ಯ ಅಥವಾ ಗಟ್ಟಿಗಳನ್ನು ಖರೀದಿಸಿ, ಮನೆಗೆ ತರಿಸಿಕೊಳ್ಳಲು ಅವಕಾಶ ಇದೆ.

‘ದೇಶದ ಸಂಸ್ಕೃತಿಯಲ್ಲಿ ಬೆಳ್ಳಿಗೆ ಮಹತ್ವವಿದೆ. ಅತ್ಯಂತ ಶುದ್ಧವಾದ ಬೆಳ್ಳಿಯ ಖರೀದಿಗೆ ಅವಕಾಶ ಕಲ್ಪಿಸಿರುವ ಮೊದಲ ಪಾವತಿ ವೇದಿಕೆ ನಮ್ಮದು’ ಎಂದು ಫೋನ್ಪೆ ಕಂಪನಿಯ ಮ್ಯೂಚುವಲ್ ಫಂಡ್ ವಿಭಾಗದ ಮುಖ್ಯಸ್ಥ ಟೆರೆನ್ಸ್ ಲೂಸಿಯನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.