ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ (ಎಂಸಿಎಲ್ಆರ್) ಆಧಾರಿತ ಸಾಲದ ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಇದರಿಂದಾಗಿ ವಾಹನಗಳು ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಇಎಂಐ ಹೆಚ್ಚಳವಾಗಲಿದೆ.

ಬಡ್ಡಿದರವು ಶೇ 8.85ರಿಂದ ಶೇ 8.90ರಷ್ಟು ಏರಿಕೆಯಾಗಲಿದೆ ಎಂದು ಬ್ಯಾಂಕ್, ಷೇರುಪೇಟೆಗೆ ಮಾಹಿತಿ ನೀಡಿದೆ.

ಮೂರು ವರ್ಷಗಳ ಎಂಸಿಎಲ್ಆರ್ ಶೇ 9.20ರಷ್ಟು ಏರಿಕೆಯಾಗಿದೆ. ಒಂದು, ಮೂರು ಮತ್ತು ಆರು ತಿಂಗಳ ಎಂಸಿಎಲ್ಆರ್ ಶೇ 8.35ರಿಂದ ಶೇ 8.55ಕ್ಕೆ ಹೆಚ್ಚಾಗಿದೆ. ಈ ಹೊಸ ಬಡ್ಡಿದರವು ಗುರುವಾರದಿಂದಲೇ ಜಾರಿಗೆ ಬಂದಿದೆ.

ಬ್ಯಾಂಕ್ ಆಫ್ ಇಂಡಿಯಾ:

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾವು ಕೂಡ ಎಂಸಿಎಲ್ಆರ್ ಆಧಾರಿತ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಒಂದು ವರ್ಷದ ಎಂಸಿಎಲ್ಆರ್ ಶೇ 8.95ರಷ್ಟು ಹೆಚ್ಚಳವಾಗಿದೆ. ಉಳಿದ ಸಾಲಗಳ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.