ನವದೆಹಲಿ: ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್ಜಿ ಅವರು ತನ್ನ ಪುತ್ರರಾದ ರಿಷದ್ ಪ್ರೇಮ್ಜಿ ಮತ್ತು ತಾರಿಕ್ ಪ್ರೇಮ್ಜಿ ಅವರಿಗೆ 1.02 ಕೋಟಿ ಈಕ್ವಿಟಿ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪ್ರಸ್ತುತ ಪ್ರತಿ ಷೇರಿನ ಬೆಲೆ ₹472.9 ಇದೆ. ಇಬ್ಬರಿಗೂ ವರ್ಗಾವಣೆ ಮಾಡಿರುವ ಷೇರುಗಳ ಮೌಲ್ಯ ಸುಮಾರು ₹483 ಕೋಟಿ ಆಗಿದೆ.

ವಿಪ್ರೊ ಕಂಪನಿಯ 1,02,30,180 ಈಕ್ವಿಟಿ ಷೇರುಗಳನ್ನು (ಕಂಪನಿಯ ಷೇರು ಬಂಡವಾಳದ ಶೇ 0.20ರಷ್ಟು) ಪುತ್ರರಿಗೆ ಉಡುಗೊರೆ ರೂಪದಲ್ಲಿ ವರ್ಗಾಯಿಸಲಾಗಿದೆ ಎಂದು ಅಜೀಂ ಪ್ರೇಮ್ಜಿ ಅವರು ಷೇರುಪೇಟೆಗೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ರಿಷದ್ ಪ್ರೇಮ್ಜಿ ಅವರು ವಿಪ್ರೊದ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.